ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಮಡಿವಾಳ ಠಾಣೆ ಪೊಲೀಸರು ಸೋಲಾಪುರ ಮೂಲದ ಪಂಚಾಕ್ಷರಿಸ್ವಾಮಿ(37) ಎನ್ನುವ ಕಳ್ಳನನ್ನು(Thieves) ಬಂಧಿಸಿದ್ದಾರೆ. ಮಾಡುತ್ತಿರುವುದು ಕಳ್ಳತನ. ಆ ಹಣದಲ್ಲಿ ಬಾಲಿವುಡ್ ನಟಿಯೊಬ್ಬರಿಗೆ(Actors) 3 ಕೋಟಿ ರೂಪಾಯಿ ಮನೆ ಗಿಫ್ಟ್ ಕೊಟ್ಟಿದ್ದ ಎನ್ನುವುದು ತಿಳಿದು ಬಂದಿದೆ. ಇವನು ಇರುವುದು 400 ಚದರ ಅಡಿ ಮನೆಯಲ್ಲಿ. ಅದು ತಾಯಿ ಹೆಸರಿನಲ್ಲಿದೆ. ಸಾಲ ಇರುವ ಕಾರಣಕ್ಕೆ ಮನೆ ಹರಾಜಿಗೆ ಬಂದಿದೆ. ಇವನು ಮದುವೆಯಾಗಿದ್ದರೂ ಹೆಣ್ಮಕ್ಕಳ ಶೋಕಿ ಬೇರೆ ಇದೆ.
ಇತನ ಮೇಲೆ ಕರ್ನಾಟಕ, ಮಹಾರಾಷ್ಟ್ರ, ಗುಜರಾತ್ ಸೇರಿ ಬೇರೆ ಬೇರೆ ರಾಜ್ಯಗಳಲ್ಲಿ 180 ಪ್ರಕರಣಗಳಿವೆ. 6 ವರ್ಷ ಗುಜರಾತಿನ ಸಬರಮತಿ ಜೈಲಿನಲ್ಲಿದ್ದು(Jail) ಬಂದಿದ್ದಾನೆ. ಮುಂದೆ ಮಹಾರಾಷ್ಟ್ರ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದ. ಅಲ್ಲಿಂದ ಬೆಂಗಳೂರಿಗೆ ಬಂದಿದ್ದಾನೆ. ಇವನ ತಂದೆ ರೈಲ್ವೆ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದವರು. ಅವರ ಸಾವಿನ ನಂತರ ತಾಯಿಗೆ ಕೆಲಸ ಬಂದಿದೆ. ಆದರೆ, ಮಗ ಮಾತ್ರ ಕಳ್ಳತನ ಕೃತ್ಯ ನಡೆಸಿಕೊಂಡು ಬಂದಿದ್ದಾನೆ.
ಜನವರಿ 9ರಂದು ಮಡಿವಾಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳ್ಳತನ ನಡೆದಿತ್ತು. ಇದರ ತನಿಖೆ ನಡೆಸುತ್ತಿದ್ದರು. ಈ ಕಳ್ಳತನ ಮಾಡಿದ್ದು ಪಂಚಾಕ್ಷರಿಸ್ವಾಮಿ ಎನ್ನುವುದು ತಿಳಿದು ಮೇಲೆ ಆತನ ಬಂಧನಕ್ಕೆ ಕಾರ್ಯಾಚರಣೆ ನಡೆಸಿದ್ದಾರೆ. ಇದೀಗ ಸಿಕ್ಕಿಬಿದ್ದಿದ್ದಾನೆ. ಇತನ ಬಳಿಕ ಚಿನ್ನ(Gold) ಕರಗಿಸುವ ಫೈರ್ ಗನ್, ಮೂಸ್ ಪತ್ತೆಯಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಇವನ ಹಿನ್ನಲೆ ಹಾಗೂ ಇನ್ನು ಯಾವೆಲ್ಲ ಕಳ್ಳತನ ಕೃತ್ಯದಲ್ಲಿ ಭಾಗಿಯಾಗಿದ್ದ ಎನ್ನುವುದರ ತನಿಖೆ ನಡೆಸಿದ್ದಾರೆ.