ಪ್ರಜಾಸ್ತ್ರ ಸುದ್ದಿ
ಕರಾಚಿ(Karachi): ನೆರೆಯ ಪಾಕಿಸ್ತಾನದಲ್ಲಿ ಎರಡು ಪ್ರತ್ಯೇಕ ಬಸ್ ಅಪಘಾತದಲ್ಲಿ 37 ಜನರು ಮೃತಪಟ್ಟಿದ್ದಾರೆ. ಪಾಕ್ ಆಕ್ರಮಿತಿ ಕಾಶ್ಮೀರದಲ್ಲಿ 35 ಜನರನ್ನು ಕರೆದುಕೊಂಡು ಹೋಗುತ್ತಿದ್ದ ಬಸ್ ಕಂದಕಕ್ಕೆ ಬಿದ್ದಿದೆ. ಇದರ ಪರಿಣಾಮ 26 ಮಂದಿ ಮೃತಪಟ್ಟಿದ್ದಾರೆ. ಇರಾನ್ ನಿಂದ ಯಾತ್ರಿಗಳನ್ನು ಪಾಕಿಸ್ತಾನದ ಪಂಜಾಬ್ ಪ್ರಾಂತ್ಯಕ್ಕೆ ಕರೆದುಕೊಂಡು ಹೋಗುತ್ತಿದ್ದಾಗ ಈ ಬಸ್ ಸಹ ಬಲೂಚಿಸ್ತಾನದಲ್ಲಿ ಕಂದಕಕ್ಕೆ ಬಿದ್ದಿದೆ. ಇದರಲ್ಲಿ 11 ಜನರ ಸಾವನ್ನಪ್ಪಿದ್ದಾರೆ. ಇದರಲ್ಲಿ 70 ಯಾತ್ರಿಕರಿದ್ದರು.
ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತರಲ್ಲಿ ಮಕ್ಕಳು, ಮಹಿಳೆಯರು ಕೂಡಾ ಇದ್ದಾರೆ. ಸ್ಥಳೀಯರ ಈ ವೇಳೆ ಸಹಾಯ ಮಾಡಿ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲು ನೆರವಾದರು. ಪಂಜಾಬ್ ಪ್ರಾಂತ್ಯದ ಮುಖ್ಯಮಂತ್ರಿ ಘಟನೆ ಕುರಿತು ಸಂತಾಪ ಸೂಚಿಸಿದ್ದಾರೆ.