ಪ್ರಜಾಸ್ತ್ರ ಸುದ್ದಿ
ಅಮ್ರೇಲಿ(Amreli): ಇತ್ತೀಚಿನ ದಿನಗಳಲ್ಲಿ ಎಂಥಾ ವಿಚಿತ್ರಗಳ ಘಟನೆಗಳು ನಡೆಯುತ್ತಿವೆ ಅಂದರೆ ಕಲ್ಪಿಸಿಕೊಳ್ಳಲು ಸಹ ಸಾಧ್ಯವಿಲ್ಲ. ಇಲ್ಲಿ ಜನರ ಹುಚ್ಚುತನವೋ, ಮೌಢ್ಯದ ಪರಾಮಾವಧಿಯೋ ತಿಳಿಯದು. ಯಾಕಂದರೆ, ಇಲ್ಲೊಂದು ಕುಟುಂಬ ತಮ್ಮ ಕಾರು ಹಳೆಯದಾಯ್ತು ಎಂದು ಅದರ ಸಮಾಧಿ ಮಾಡಿದ್ದಾರೆ. ಗುಜರಾತಿನ ಅಮ್ರೇಲಿ ಜಿಲ್ಲೆಯ ಪದರ್ ಶಿಂಗಾ ಗ್ರಾಮದಲ್ಲಿ ಇಂತಹದೊಂದು ಘಟನೆ ನಡೆದಿದ್ದು, ಇದರ ವಿಡಿಯೋ ಸಹ ವೈರಲ್ ಆಗಿದೆ. ಸಂಜಯ್ ಪೋಲಾರಾ ಎಂಬುವರ ಕುಟುಂಬ ಧಾರ್ಮಿಕ ವಿಧಿ ವಿಧಾನಗಳ ಮೂಲಕ ತಮ್ಮ ಕಾರಿನ ಅಂತ್ಯಸಂಸ್ಕಾರ(Car Funeral)ಮಾಡಿದ್ದಾರೆ.
ಸಂಜಯ್ ಪೋಲಾರಾ ಕುಟುಂಬ 12 ವರ್ಷಗಳ ಹಿಂದೆ ವ್ಯಾಗನ್ ಆರ್ ಕಾರು ಖರೀದಿ ಮಾಡಿದೆ. ಬಳಿಕ ಅವರಿಗೆ ಅದೃಷ್ಟ ತಂದಿದೆಯಂತೆ. ಹೀಗಾಗಿ ಕಾರು ಹಳೆಯದಾಗಿ ವೃದ್ಧಾಪ್ಯಕ್ಕೆ ಕೃತ್ಞತೆ ಸಲ್ಲಿಸಲು ಬರೋಬ್ಬರಿ 4 ಲಕ್ಷ ರೂಪಾಯಿ ಖರ್ಚು ಮಾಡಿ ತಮ್ಮ ಜಮೀನಿನಲ್ಲಿ ಸಮಾಧಿ ಮಾಡಿದ್ದಾರೆ. ಇದಕ್ಕಾಗಿ 1,500ಕ್ಕೂ ಹೆಚ್ಚು ಜನರನ್ನು ಸೇರಿಸಿದ್ದಾರೆ. ಕಾರು ಖರೀದಿ ಬಳಿಕ ತಮ್ಮ ವ್ಯವಹಾರದಲ್ಲಿ ಯಶಸ್ಸು ಆಗಿದೆಯಂತೆ. ಇದನ್ನು ಬೇರೆಯವರಿಗೆ ಮಾರುವ ಬದಲು ಸಮಾಧಿ ನಿರ್ಮಿಸಿ ಗೌರವ ಸಲ್ಲಿಸಿದ್ದೇವೆ ಎಂದು ಹೇಳಿದ್ದಾರೆ. ತಮ್ಮ ಅದೃಷ್ಟದ ಕಾರು ಎಂದಾರೆ ಅದನ್ನು ನೆನಪಿಗಾಗಿ ಕಣ್ಮುಂದೆ ಇಟ್ಟುಕೊಳ್ಳುವ ವ್ಯವಸ್ಥೆ ಮಾಡಬಹುದಿತ್ತು. ಇದನ್ನು ಅಂತ್ಯಸಂಸ್ಕಾರ ಮಾಡಿದ್ದೇವೆ. ಸಮಾಧಿ ಕಟ್ಟುತ್ತೇವೆ ಅನ್ನೋ ಜನರಿದ್ದಾರೆ. ಇನ್ನು ಏನೇನೂ ನೋಡಬೇಕೋ ಈ ಕಣ್ಣಲ್ಲಿ ಎಂದು ಕೆಲವರು ಹೇಳುತ್ತಿದ್ದಾರೆ.