ಪ್ರಜಾಸ್ತ್ರ ಸುದ್ದಿ
ಕಟಿಹಾರ(Katihar): ದೋಣಿ ಮಗುಚಿ ಬಿದ್ದ ಪರಿಣಾಮ ಮೂವರು ಮೃತಪಟ್ಟಿದ್ದು, ನಾಲ್ವರು ನಾಪತ್ತೆಯಾದ ಘಟನೆ ಬಿಹಾರದ ಕಟಿಹಾರ್ ಜಿಲ್ಲೆಯ ಗೋಲಾಘಟ್ ನಲ್ಲಿ ಭಾನುವಾರ ನಡೆದಿದೆ. ಇಬ್ಬರು ಮೃತರ ಗುರುತು ಪತ್ತೆಯಾಗಿದ್ದು, ಪವನ್ ಕುಮಾರ್(60), ಸುಧೀರ್ ಮಂಡಲ್(70) ಎಂದು ತಿಳಿದು ಬಂದಿದೆ. ಇನ್ನೊಬ್ಬನ ಗುರುತು ಪತ್ತೆಯಾಗಬೇಕಿದೆ.
ಘಟನೆಯಲ್ಲಿ 10 ಮಂದಿಯನ್ನು ರಕ್ಷಿಸಲಾಗಿದೆ. ಇದರಲ್ಲಿ ಬಹುತೇಕರು ಈಜಿ ದಡ ಸೇರಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನಾಪತ್ತೆಯಾದ ನಾಲ್ವರ ಶೋಧ ಕಾರ್ಯ ನಡೆದಿದೆ. 17 ಪ್ರಯಾಣಿಕರನ್ನು ಕರೆದುಕೊಂಡು ಸಾಗುತ್ತಿದ್ದ ದೋಣಿ ಮಗುಚಿ ಈ ದುರಂತ ನಡೆದಿದೆ. ಇದಕ್ಕೆ ಏನು ಕಾರಣ ಎನ್ನುವ ತನಿಖೆ ನಡೆದಿದೆ.