ಪ್ರಜಾಸ್ತ್ರ ಸುದ್ದಿ
ಇವತ್ತಿನ ದಿನಮಾನದಲ್ಲಿ ಸೆಲೆಬ್ರಿಟಿಗಳು ಗರ್ಭಿಣಿಯಾದರೆ ಫೋಟೋಶೂಟ್ ಮಾಡಿಸುವುದು ಕಾಮನ್ ಆಗಿದೆ. ಇದು ಅತೀ ಹೆಚ್ಚಾಗಿ ಕಾಣಿಸಿಕೊಳ್ಳುವುದು ಚಿತ್ರರಂಗದಲ್ಲಿ. ಸ್ಮಾಲ್ ಸ್ಕ್ರೀನ್ ನಟಿಯರು ಇರಲಿ, ಬಿಗ್ ಸ್ಕ್ರೀನ್ ನಟಿಯರು ಇರಲಿ. ತುಂಬಿ ಗರ್ಭಿಣಿಯಾಗಿದ್ದ ಸಂದರ್ಭದಲ್ಲಿ ಫೋಟೋಶೂಟ್ ಮಾಡಿಸುತ್ತಾರೆ. ಅದೇ ರೀತಿ ಬಿಟೌನ್ ಬ್ಯೂಟಿ, ಕನ್ನಡತಿ ನಟಿ ದೀಪಿಕಾ(deepika padukone) ಪಡುಕೋಣೆ ಫೋಟೋಶೂಟ್ ಮಾಡಿಸಿದ್ದಾರೆ. 38 ವರ್ಷದ ನಟಿ ದೀಪಿಕಾ, ನಟ ರಣವೀರ್ ಸಿಂಗ್ ಅವರನ್ನು 2018ರಲ್ಲಿ ಮದುವೆಯಾಗಿದ್ದಾರೆ. ಇತ್ತೀಚೆಗೆ ಅವರಿಗೆ ಹೆಣ್ಣು ಮಗುವಾಗಿದ್ದು, ಬೇಬಿ ಬಂಪ್ಸ್(baby bump) ಫೋಟೋಗಳನ್ನು ಈಗ ರಿವೀಲ್ ಮಾಡಿದ್ದಾರೆ.