ಪ್ರಜಾಸ್ತ್ರ ಸುದ್ದಿ
ಕೊಲ್ಕತ್ತಾ(Kolkata): ಆರ್.ಜೆ ಕಾರ್ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಆಸ್ಪತ್ರೆಯಲ್ಲಿನ ವಿದ್ಯಾರ್ಥಿನಿಯ ಅತ್ಯಾಚಾರ ಹಾಗೂ ಕೊಲೆ ಅಪರಾಧಿ ಸಂಜಯ್ ರಾಯ್ ಗೆ ಸಿಯಾಲ್ದಾ ಕೋರ್ಟ್ ಜೀವನಪೂರ್ತಿ ಜೈಲಿನಲ್ಲಿರುವ ಶಿಕ್ಷೆ ವಿಧಿಸಿದೆ. ಆದರೆ, ಅಪರಾಧಿಗೆ ಗಲ್ಲು ಶಿಕ್ಷೆ ನೀಡಬೇಕೆಂದು ಸಿಬಿಐ ಹೈಕೋರ್ಟ್ ಮೆಟ್ಟಿಲು ಏರಿದೆ. ಪ್ರಕರಣದ ತನಿಖೆ ನಡೆಸಿದ ನಮಗೆ ಕೆಳ ನ್ಯಾಯಾಲಯದ ಆದೇಶವನ್ನು ಹೈಕೋರ್ಟ್ ನಲ್ಲಿ ಪ್ರಶ್ನಿಸುವ ಹಕ್ಕಿದೆ ಎಂದು ಸಿಬಿಐ ಪರವಾಗಿ ಹಾಜರಿದ್ದ ಡೆಪ್ಯೂಟಿ ಸಾಲಿಸಿಟರ್ ಜನರಲ್ ರಾಜ್ ದೀಪ್ ಮಜುಂದಾರ್ ವಾದಿಸಿದ್ದಾರೆ.
ಪಶ್ಚಿಮ ಬಂಗಾಳ ಸರ್ಕಾರ ಸಹ ಇದೇ ರೀತಿ ಮನವಿಯನ್ನು ಸಲ್ಲಿಸಿದೆ. ಎರಡನ್ನು ಒಟ್ಟಿಗೆ ನಡೆಸಲಾಗುವುದು ಎಂದು ವಿಭಾಗೀಯ ಪೀಠದ ನ್ಯಾಯಮೂರ್ತಿಗಳು ಹೇಳಿದ್ದು, ಜನವರಿ 27ಕ್ಕೆ ವಿಚಾರಣೆ ನಿಗದಿಯಾಗಿದೆ. ಜನವರಿ 20ರಂದು ಕೆಳ ಹಂತದ ನ್ಯಾಯಾಲಯ ಅಪರಾಧಿ ಸಂಜಯ್ ರಾಯ್ ಗೆ ಜೀವಾವಧಿ ಶಿಕ್ಷೆ ವಿಧಿಸಿ ಆದೇಶಿಸಿದೆ.