Ad imageAd image

ಸಿಎಂ ಪತ್ನಿ, ಸಚಿವ ಭೈರತಿ ಸುರೇಶಗೆ ನೋಟಿಸ್, ಸಿ.ಟಿ ರವಿ ಹೀಗಂದ್ರು..

Nagesh Talawar
ಸಿಎಂ ಪತ್ನಿ, ಸಚಿವ ಭೈರತಿ ಸುರೇಶಗೆ ನೋಟಿಸ್, ಸಿ.ಟಿ ರವಿ ಹೀಗಂದ್ರು..
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಬೆಂಗಳೂರು(Bengaloru): ಮುಡಾ ಹಗರಣಕ್ಕೆ(MUDA Scam) ಸಂಬಂಧಿಸಿದಂತೆ ಇಡಿಯಿಂದ ಮುಖ್ಯಮಂತ್ರಿ ಪತ್ನಿ ಪಾರ್ವತಿ ಹಾಗೂ ಸಚಿವ ಭೈರತಿ ಸುರೇಶ್ ಅವರಿಗೆ ನೋಟಿಸ್ ನೀಡಲಾಗಿದೆ. ಸೋಮವಾರ ಹಾಗೂ ಮಂಗಳೂರು ಧಾರವಾಡ ಹೈಕೋರ್ಟ್ ಪೀಠದಲ್ಲಿ ವಿಚಾರಣೆ ನಡೆಯಲಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ಎಂಎಲ್ಸಿ ಸಿ.ಟಿ ರವಿ, ಮಖ್ಯಮಂತ್ರಿಗಳ ಪತ್ನಿ ಆಗದಿದ್ದರೆ 30 ವರ್ಷಗಳ ಹಿಂದೆ ನಿರ್ಮಾಣವಾದ ವಿಜಯನಗರದಲ್ಲಿ ಬದಲಿ ನಿವೇಶನ ಸಿಗುತ್ತಿರಲಿಲ್ಲ. ಅಂಗೈ ಹುಣ್ಣಿಗೆ ಕನ್ನಡಿ ಬೇಕಿಲ್ಲ. ಅದರಂತೆ ಮುಡಾ ಹಗರಣಕ್ಕೂ ಕನ್ನಡಿ ಬೇಕಿಲ್ಲ ಎಂದರು.

ಇಡಿ(ED) 142 ನಿವೇಶನಗಳನ್ನು ವಶಪಡಿಸಿಕೊಂಡಿದೆ. ಆದರೆ, ಈ ಕುರಿತು ಲೋಕಾಯುಕ್ತ ತಲೆ ಕೆಡಿಸಿಕೊಂಡಿಲ್ಲ. 50:50 ಅನುಪಾತದಲ್ಲಿ ನಿವೇಶನ ಕೊಡಲು ಬರುವುದಿಲ್ಲ. ಮುಖ್ಯಮಂತ್ರಿಯವರ ಪತ್ನಿಗೆ ಕೊಟ್ಟಿರುವುದು ತಪ್ಪಲ್ಲವೇ ಎಂದು ಕಿಡಿ ಕಾರಿದರು. ಈ ಪ್ರಕರಣದಲ್ಲಿ ಸ್ನೇಹಮಹಿ ಕೃಷ್ಣ ಎಂಬುವರು ಹೋರಾಟ ನಡೆಸುತ್ತಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಕಾನೂನು ಹೋರಾಟ ನಡೆಸುತ್ತಿದ್ದಾರೆ. ಟಿ.ಕೆ ಅಬ್ರಾಹಿಂ ಅವರು ಇದರ ಬೆನ್ನು ಬಿದ್ದಿದ್ದಾರೆ. ಆದರೆ, ಸಧ್ಯಕ್ಕೆ ಅವರು ಸೈಲೆಂಟ್ ಆದಂತೆ ಕಾಣಿಸುತ್ತಿದ್ದಾರೆ.

WhatsApp Group Join Now
Telegram Group Join Now
Share This Article