Ad imageAd image

8 ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ದರ್ಶನ್ ಮ್ಯಾನೇಜರ್ ಪ್ರತ್ಯಕ್ಷ

Nagesh Talawar
8 ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ದರ್ಶನ್ ಮ್ಯಾನೇಜರ್ ಪ್ರತ್ಯಕ್ಷ
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಬೆಂಗಳೂರು(Bengaloru): ಸುಮಾರು 8 ವರ್ಷಗಳ ಹಿಂದೆ ಏಕಾಏಕಿ ನಾಪತ್ತೆಯಾಗಿದ್ದ ನಟ ದರ್ಶನ್ ಅವರ ಅಂದಿನ ಮ್ಯಾನೇಜರ್ ಮಲ್ಲಿಕಾರ್ಜುನ ಬಿ.ಸಂಕನಗೌಡರ ಇದೀಗ ಪ್ರತ್ಯಕ್ಷರಾಗಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ತಾವು ಊರು ಬಿಟ್ಟು ಹೋಗಲು ಏನು ಕಾರಣ ಅನ್ನೋದು ಹೇಳಿದ್ದಾರೆ.

ಇಂಜಿನಿಯರಿಂಗ್ ಮುಗಿಸಿ ಅಸಿಸ್ಟಂಟ್ ಡೈರೆಕ್ಟರ್ ಆದ ಬಳಿಕ ದರ್ಶನ್ ಅವರ ಹತ್ತಿರ ಮ್ಯಾನೇಜರ್ ಕೆಲಸ ಶುರು ಮಾಡಿದೆ. ‘ಮೊದಲ ಸಲ’ ಸಿನಿಮಾ ಮಾಡಿದೆ. ಅದು ಕೈ ಹಿಡಿಯಲಿಲ್ಲ. ಡಿಸ್ಟ್ರಿಬ್ಯೂಷನ್, ಹೋಟೆಲ್ ಉದ್ಯಮ ಮಾಡಿದೆ. ಯಾವುದೂ ಕೈ ಹಿಡಿಯಲಿಲ್ಲ. ಸಾಕಷ್ಟು ಸಾಲ ಮಾಡಿಕೊಂಡೆ. ನಂತರ ಸಾಯುವ ನಿರ್ಧಾರಕ್ಕೆ ಬಂದಿದ್ದೆ. ಆದರೆ, ಅದರಿಂದ ಹಿಂದೆ ಸರಿದೆ. ದರ್ಶನ್ ಅವರ ಮೇಲಿನ ಗೌರವದಿಂದ ಊರು ಬಿಟ್ಟೆ ಎಂದಿದ್ದಾರೆ.

ಕುಂದಾಪುರದಿಂದ ಸವದತ್ತಿಗೆ ಹೋಗಿ ಸ್ನೇಹಿತನ ಹತ್ತಿರ ಹಣ ಪಡೆದು ಕೊಲ್ಲಾಪುರ, ಸೊಲ್ಲಾಪುರ, ಸೇರಿದಂತೆ ಉತ್ತರ ಭಾರತ ಸೇರಿ ಅನೇಕ ಕಡೆ ತಿರುಗಾಡಿದೆ. ಹೋಟೆಲ್, ರೆಸಾರ್ಟ್ ಸೇರಿ ಹಲವು ಕಡೆ ಕೆಲಸ ಮಾಡಿದೆ. ಹೆಂಡ್ತಿ, ತಾಯಿಗೆ ಪತ್ರ ಬರೆದೆ. ಸತ್ಯ ಒಪ್ಪಿಕೊಳ್ಳಬೇಕು ಎನಿಸಿತು. ಅಪ್ಪ, ಅಮ್ಮ ತೀರಿಕೊಂಡಾಗಲೂ ಬರೋದಕ್ಕೆ ಆಗಲಿಲ್ಲ. 7 ವರ್ಷ ಅಜ್ಞಾತ ವಾಸದಲ್ಲಿದೆ. ನಿನಗೆ ಸಾಡ್ ಸಾಥ್ ಇದೆ. ಬಹಳ ಎಚ್ಚರದಿಂದ ಇರು ಎಂದು ಗುರುಗಳೊಬ್ಬರು ಹೇಳಿದ್ದರು. ಈಗ ಕಳೆದಿದೆ. ಸಾಲ ಕೊಟ್ಟವರ ಮನೆಗೆಲ್ಲ ಹೋಗಿ ಮಾತನಾಡಿದ್ದೇನೆ. ಸಾಲು ಕೊಡುವುದಾಗಿ ಹೇಳಿದ್ದೇನೆ ಅಂತಾ ಮಲ್ಲಿಕಾರ್ಜುನ ಸಂಕನಗೌಡರ ಹೇಳಿದ್ದಾರೆ.

WhatsApp Group Join Now
Telegram Group Join Now
Share This Article