Ad imageAd image

ಮಂತ್ರಿ ಮಾಡಿ ಎಂದು ಕೇಳುವ ಸಮಯ ಇದಲ್ಲ: ಡಿಸಿಎಂ ಡಿ.ಕೆ ಶಿವಕುಮಾರ್

Nagesh Talawar
ಮಂತ್ರಿ ಮಾಡಿ ಎಂದು ಕೇಳುವ ಸಮಯ ಇದಲ್ಲ: ಡಿಸಿಎಂ ಡಿ.ಕೆ ಶಿವಕುಮಾರ್
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಬೆಂಗಳೂರು(Bengaloru): ಸಚಿವ ಸಂಪುಟ ಪುನರ್ ರಚನೆಗೆ ಸಂಬಂಧಿಸಿದಂತೆ ಕೆಲ ಶಾಸಕರು ದೆಹಲಿಗೆ ತೆರಳಿದ್ದಾರೆ. ಇದರ ನಡುವೆ ಕೆಪಿಸಿಸಿ ಅಧ್ಯಕ್ಷ ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರನ್ನು ಸದಾಶಿವ ನಗರದಲ್ಲಿ ತಮ್ಮ ಮನೆಯಲ್ಲಿ ಭೇಟಿ ಮಾಡಿ ಚರ್ಚಿಸಿದ್ದಾರೆ. ಇದಾದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದರು, ಮಂತ್ರಿ ಮಾಡಿ ಎಂದು ಕೇಳುವ ಸಮಯ ಇದಲ್ಲ ಅಂತಾ ಹೇಳಿದರು.

ಮಾಧ್ಯಮದಲ್ಲಿ ಕೆಲವರು ಈ ಬಗ್ಗೆ ಮಾತನಾಡುತ್ತಿರುವುದನ್ನು ಕೇಳಿದ್ದೇನೆ. ಆದ್ರೆ, ಮಾಧ್ಯಮ ನಿಮ್ಮ ಭವಿಷ್ಯವಲ್ಲ. ಪಕ್ಷ ನಿಮ್ಮ ಭವಿಷ್ಯ. ಸಂಪುಟ ಪುರನ್ ರಚನೆ ಕೇಳುವ ಸಮಯವಲ್ಲ. ಮಂತ್ರಿ ಮಾಡಿ ಎಂದು ಕೇಳುವ ಸಮಯವೂ ಅಲ್ಲ. ಮೊದಲ ಬಾರಿಗೆ ಸಚಿವರಾಗಬೇಕು ಅನ್ನೋರು ಬಹಳ ಮಂದಿ ಇದ್ದಾರೆ. ದೆಹಲಿಗೆ ಹೋಗಿರುವ ಕೆಲವರು ನನ್ನ ಜೊತೆಯಲ್ಲಿ ಚರ್ಚಿಸಿದ್ದಾರೆ. ಪಕ್ಷದ ಶಿಸ್ತು ಯಾರು ಮೀರಬಾರದು. ಪಕ್ಷದ ಚೌಕಟ್ಟಿನೊಳಗೆ ಎಲ್ಲರೂ ಮಾತನಾಡಬೇಕು ಎಂದರು.

WhatsApp Group Join Now
Telegram Group Join Now
Share This Article