ಪ್ರಜಾಸ್ತ್ರ ಸುದ್ದಿ
ಉತ್ತರ ಕನ್ನಡ(Uttara Kannada): ಕಳೆದ ಜುಲೈ 16ರಂದು ಜಿಲ್ಲೆಯ ಶಿರೂರು ಗುಡ್ಡ(Landslide) ಕುಸಿತವಾಗಿತ್ತು. ಇದುವರೆಗೂ ಇದರಲ್ಲಿ 9 ಮಂದಿ ಮೃತಪಟ್ಟಿದ್ದಾರೆ. ಈ ಘಟನೆಯಲ್ಲಿ ಕಾಣೆಯಾಗಿದ್ದ ಲಾರಿ ಹಾಗೂ ಲಾರಿ ಚಾಲಕ ಇದುವರೆಗೂ ಪತ್ತೆಯಾಗಿರಲಿಲ್ಲ. ಇತ್ತೀಚೆಗೆ ಲಾರಿ ಅವಶೇಷಗಳು ಪತ್ತೆಯಾಗಿದ್ದವು. ಈಗ ಲಾರಿ ಚಾಲಕ ಅರ್ಜುನ್ ಮೃತದೇಹ ಪತ್ತೆಯಾಗಿದೆ.
ಗಂಗಾವಳಿ ನದಿಯ ಆಳದಲ್ಲಿ ಸಿಲುಕಿಕೊಂಡಿದ್ದ ಲಾರಿಯೊಳಗೆ ಅರ್ಜುನ್ ಮೃತದೇಹ ಬುಧವಾರ ಪತ್ತೆಯಾಗಿದೆ ಎಂದು ಎಸ್ಪಿ ಎಂ.ನಾರಾಯಣ್ ತಿಳಿಸಿದ್ದಾರೆ. ಈತ ಕೇರಳದ ಕೋಯಿಕ್ಕೋಡ್ ಮೂಲದ ಲಾರಿ(Driver) ಚಾಲಕನಾಗಿದ್ದಾನೆ. ಮರದ ದಿಮ್ಮಿ ಸಾಗಿಸುತ್ತಿದ್ದಾಗ ಗುಡಿ ಕುಸಿತವಾಗಿ ಲಾರಿ ಸಮೇತ ಅರ್ಜುನ್ ನಾಪತ್ತೆಯಾಗಿದ್ದ.