ಪ್ರಜಾಸ್ತ್ರ ಸುದ್ದಿ
ಕಲಬುರಗಿ(Kalaburagi): ಕಾರು(Car) ಹಾಗೂ ಮಹಿಂದ್ರಾ ಪಿಕಪ್ ಗೂಡ್ಸ್(Mahindra Pickup) ವಾಹನದ ನಡುವೆ ಶನಿವಾರ ನಸುಕಿನಜಾವ ಮರಗುತ್ತಿ ಕ್ರಾಸ್ ಹತ್ತಿರ ಅಪಘಾತ ಸಂಭವಿಸಿದೆ. ಇದರಿಂದಾಗಿ ನಾಲ್ವರು ಮೃತಪಟ್ಟಿದ್ದಾರೆ. ಹೈದರಾಬಾದ್ ಮೂಲದ ಭಾರ್ಗವ ಕೃಷ್ಣ(55), ಪತ್ನಿ ಸಂಗೀತಾ(45), ಮಗ ಉತ್ತಮ್ ರಾಘವನ್(28) ಹಾಗೂ ಚಾಲಕ ಮೃತ ದುರ್ದೈವಿಗಳು. ಚಾಲಕನ ಗುರುತು ಪತ್ತೆಯಾಗಿಲ್ಲ.
ಗಾಣಗಾಪುರದ ದತ್ತನ ದರ್ಶನಕ್ಕೆ ಇವರೆಲ್ಲ ಹೊರಟಿದ್ದರು. ಕಮಲಾಪುರ ತಾಲೂಕಿನ ಮರಗುತ್ತಿ ಕ್ರಾಸ್ ಹತ್ತಿರದಲ್ಲಿರುವ ಆನಂದ ಶಾಲೆಯ ಬಳಿ ಕಾರು ಹಾಗೂ ಗೂಡ್ಸ್ ವಾಹನ ಮುಖಾಮುಖಿ ಡಿಕ್ಕಿಯಾಗಿ(Accident) ಅನಾಹುತ ಸೃಷ್ಟಿಯಾಗಿದೆ. ಮೃತದೇಹಗಳನ್ನು ಕಮಲಾಪುರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ರವಾನಿಸಲಾಗಿದೆ. ಘಟನೆ ಬಗ್ಗೆ ಕುಟುಂಬಸ್ಥರಿಗೆ ಮಾಹಿತಿ ನೀಡಲಾಗಿದೆ. ಅವರು ಬಂದ ಬಳಿಕ ಹೆಚ್ಚಿನ ಮಾಹಿತಿ ತಿಳಿದು ಬರಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.