ಪ್ರಜಾಸ್ತ್ರ ಸುದ್ದಿ
ವಾತಾವರಣಕ್ಕೆ ತಕ್ಕಂತೆ ಉಡುಪು, ಆಹಾರ ಕ್ರಮವೆಲ್ಲ ಬದಲಾಗುತ್ತೆ. ಈಗ ಮಳೆಗಾಲ ಶುರುವಾಗಿದೆ. ಹೀಗಾಗಿ ದೇಹವನ್ನು ಬೆಚ್ಚಗಿಡಲು ಮತ್ತು ಆರೋಗ್ಯಯುತವಾಗಿರಲು ನಾನಾ ಬಗೆಯ ಆಹಾರದ ಮೊರೆ ಹೋಗಲಾಗುತ್ತೆ. ಸಂಜೆ ಆಗುತ್ತಿದ್ದಂತೆ ಏನಾದರೂ ಬಿಸಿ ಬಿಸಿ ತಿನಿಸು ಬೇಕು ಅನಿಸುತ್ತೆ. ರೋಗನಿರೋಧಕ ಶಕ್ತಿ ಹೆಚ್ಚಿಸುವ ಸೂಪ್ ಕುಡಿದರೆ ಹೇಗಿರುತ್ತೆ ಅಲ್ವಾ. ಹಾಗಿದ್ದರೆ ಶುಂಠಿ ಬೆಳ್ಳುಳ್ಳಿ ಸೂಪ್ ಮಾಡಿಕೊಂಡು ಸವಿಯಬಹುದು.
ಬೇಕಾದ ವಸ್ತುಗಳು: ಶುಂಠಿ, ಬೆಳ್ಳುಳ್ಳಿ, ಕರಿಮೆಣಸು, ಜೋಳದಹಿಟ್ಟು, ತುಪ್ಪ, ಎಲೆಕೋಸು(ಕ್ಯಾಬೇಜ್), ಗಜ್ಜರಿ, ಉಪ್ಪು, ನೀರು. ಈ ಎಲ್ಲ ಸಾಮಗ್ರಿಗಳನ್ನು ಸಿದ್ಧ ಮಾಡಿಕೊಂಡು ರುಚಿ ರುಚಿಯಾದ ಸೂಪ್ ತಯಾರಿಸಿ ಕುಡಿಯಬಹುದು.
ಸೂಪ್ ಮಾಡುವ ವಿಧಾನ: ಶುಂಠಿ, ಬೆಳ್ಳುಳ್ಳಿ ಕುಟ್ಟಿಕೊಳ್ಳಬೇಕು. ಕೆರಿಮೆಣಸು ಪುಡಿಮಾಡಿಕೊಳ್ಳಬೇಕು. ನಂತರ ಶುಂಠಿ, ಬೆಳ್ಳುಳ್ಳಿ ಪೇಸ್ಟ್ ಅನ್ನು ತುಪ್ಪದಲ್ಲಿ ಕರಿಯಬೇಕು. ನಂತರ ಹೆರಚಿಟ್ಟುಕೊಂಡು ಎಲೆಕೋಸು, ಗಜ್ಜರಿಯನ್ನು ಹಾಕಿ ಫ್ರೈ ಮಾಡಿಕೊಳ್ಳಬೇಕು. ನಂತರ ನೀರು ಹಾಕಿ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಕುದಿಸಿಕೊಳ್ಳಬೇಕು. ನಂತರ ಒಂದಿಷ್ಟು ಜೋಳದಹಿಟ್ಟನ್ನು ನೀರಿನಲ್ಲಿ ಗಂಟಾಗದಂತೆ ಕಲಸಿ, ಅದಕ್ಕೆ ಪುಡಿ ಮಾಡಿದ ಕರಿಮೆಣಸು ಹಾಕಿ ಮಿಶ್ರಣ ಮಾಡಿ, ಎರಡನ್ನು ಸೇರಿಸಿ ಕುದಿಸಿದರೆ ಶುಂಠಿ, ಬೆಳ್ಳುಳ್ಳಿ ಸೂಪ್ ಸಿದ್ಧವಾಗುತ್ತೆ. ಸುರಿಯುವ ಮಳೆ, ತಣ್ಣನೆಯ ಗಾಳಿಯ ಹಿತ ಅನುಭವದೊಂದಿಗೆ ಸೂಪ್ ಸವಿಯುತ ಎಂಜಾಯ್ ಮಾಡಬಹುದು.