ಪ್ರಜಾಸ್ತ್ರ ಸುದ್ದಿ
ಪ್ರಕೃತಿ ಬದಲಾವಣೆಯಾಗುವ ಸಂದರ್ಭದಲ್ಲಿ ನಮ್ಮ ಆಹಾರ ಹಾಗೂ ದಿನಚರಿಯಲ್ಲೂ ಬದಲಾವಣೆಯಾಗುತ್ತೆ. ಇವತ್ತಿನ ಒತ್ತಡದ ಬದುಕಿನಲ್ಲಿ ಆರೋಗ್ಯದ(Health Care) ಕಡೆ ಗಮನ ಹರಿಸುವುದು ಕಡಿಮೆಯಾಗುತ್ತಿದೆ. ಹೀಗಾಗಿ ಅನೇಕ ಸಮಸ್ಯೆಗಳನ್ನು ಜನರು ಎದುರಿಸುತ್ತಿದ್ದಾರೆ. ಚಳಿಗಾಲದಲ್ಲಿ ಬೆಚ್ಚಗೆ ಇರಲು ಪ್ರಯತ್ನಿಸುತ್ತೇವೆ. ಅದೇ ರೀತಿ ಊಟದಲ್ಲಿ ಒಂದಿಷ್ಟು ಬದಲಾವಣೆಯಾಗುತ್ತೆ. ಮೂಲಂಗಿ(Radish) ಸೇವನೆ ಆರೋಗ್ಯ ಒಳ್ಳೆಯದು. ಇದರಲ್ಲಿ ಕ್ಯಾಲ್ಸಿಯಂ ಹಾಗೂ ಆಂಟಿ ಆಕ್ಸಿಡೆಂಟ್ ಗಳು ಹೆಚ್ಚಾಗಿವೆ. ಇದರಿಂದ ರಕ್ತದೊತ್ತಡ ಹಾಗೂ ಹೃದಯ ಸಂಬಂಧಿಸಿದ ಕಾಯಿಲೆಯಿಂದ ದೂರ ಇಡುತ್ತೆ.
ಮಧುಮೇಹಿಗಳು(Diabetics)ವಾರದಲ್ಲಿ ಎರಡ್ಮೂರು ಬಾರಿ ಮೂಲಂಗಿ ತಿನ್ನುವುದು ಒಳ್ಳೆಯದು. ಮೂಲವ್ಯಾಧಿ ಸಮಸ್ಯೆಯಿಂದ ಬಳಲುತ್ತಿರುವವರು ಸಹ ಮೂಲಂಗಿ ಸೇವನೆ ಉತ್ತಮ. ನಮ್ಮಲ್ಲಿನ ಹಲವು ರೀತಿಯ ಆರೋಗ್ಯದ ಸಮಸ್ಯೆಗೆ ಇದು ಮದ್ದಿನ ರೀತಿ ಕೆಲಸ ಮಾಡುತ್ತೆ. ತರಕಾರಿ, ಸೊಪ್ಪು, ಹಣ್ಣುಗಳು ಎಂದಿಗೂ ಮನುಷ್ಯನಿಗೆ ರೋಗನಿರೋಧ ಶಕ್ತಿಯನ್ನು ಹೆಚ್ಚಿಸುವ ಗುಣಗಳನ್ನು ಹೊಂದಿವೆ. ಆದರೆ, ಯಾರು, ಎಷ್ಟು ಪ್ರಮಾಣದಲ್ಲಿ ತಿನ್ನಬೇಕು? ಯಾವುದನ್ನು ತಿನ್ನಬಾರದು ಅನ್ನೋದು ಆಯಾ ಪರಿಣಿತ ವೈದ್ಯರ ಸಲಹೆ, ಸೂಚನೆ ಪಡೆದು ತಿನ್ನುವುದು ಒಳ್ಳೆಯದು. ಕೆಲವೊಮ್ಮೆ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯೆತೆಗಳು ಇರುತ್ತವೆ. ಹೀಗಾಗಿ ವೈದ್ಯರು ಸಲಹೆಯನ್ನು ಪಡೆಯಿರಿ.