ಪ್ರಜಾಸ್ತ್ರ ಸುದ್ದಿ
ದುಬೈ(Dubai): ಹಿಜಾಬ್ ವಿರುದ್ಧ ಯುವತಿಯೊಬ್ಬಳು ಅರೆಬೆತ್ತಲೆಯಾಗಿ ಪ್ರತಿಭಟನೆ ನಡೆಸಿದ ಘಟನೆ ಇರಾನ್ ನ ಟೆಹರಾನ್ ನ ಇಸ್ಲಾಮಿಕ್ ಆಜಾದ್ ವಿಶ್ವವಿದ್ಯಾಲಯದಲ್ಲಿ ನಡೆಸಿದ್ದಾಳೆ. ಇಲ್ಲಿ ವಸ್ತ್ರಸಂಹಿತೆ ಸಾಕಷ್ಟು ಕಟ್ಟುನಿಟ್ಟಾಗಿದ್ದು, ಇದನ್ನು ಖಂಡಿಸಿ ವಿದ್ಯಾರ್ಥಿನಿ ಅರೆನಗ್ನವಾಗಿ ಪ್ರತಭಟನೆ ನಡೆಸಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ಬಗ್ಗೆ ವಿಶ್ವವಿದ್ಯಾಲಯದ ವಕ್ತಾರ ಅಮೀರ್ ಮಹಜೋಬ್ ಪ್ರತಿಕ್ರಿಯೆ ನೀಡಿದ್ದು, ವಿದ್ಯಾರ್ಥಿನಿ ಮಾನಸಿಕ ಅಸ್ವಸ್ಥೆಯಾಗಿದ್ದು ಆಕೆಯನ್ನು ಬಂಧಿಸಿದ್ದಾರೆ ಎಂದು ತಿಳಿಸಿದ್ದಾರೆ. 2022ರಲ್ಲಿ ಪೊಲೀಸ್ ಕಸ್ಟಡಿಯಲ್ಲಿರುವಾಗಲೇ ಮಾಶಾ ಅಮಿನಿ ಮೃತಪಟ್ಟಳು. ಮುಂದೆ ಹಿಜಾಬ್ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಮಹಿಳೆಯರು ಸೇರಿದಂತೆ 551 ಜನರು ಮೃತಪಟ್ಟಿದ್ದಾರೆ.