ಪ್ರಜಾಸ್ತ್ರ ಸುದ್ದಿ
ಮಂಗಳೂರು(Mangaloru): ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ಸಚಿವ ಜಮೀರ್ ಅಹ್ಮದ್ ಕರಿಯ ಎನ್ನುವ ಪದಪ್ರಯೋಗ ಮಾಡಿರುವುದು ತಮಗೆ ಹಾನಿಯಾಗಿದೆ ಎಂದು ಚನ್ನಪಟ್ಟಣ ಉಪ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ ಯೋಗೇಶ್ವರ್ ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿದ ಸಚಿವ ಜಮೀರ್ ಅಹ್ಮದ್, ನನ್ನ ಹೇಳಿಕೆಯಿಂದ ಯಾವುದೇ ಹಾನಿಯಾಗಿಲ್ಲ. 20 ಸಾವಿರ ಮತಗಳ ಅಂತರದಿಂದ ಸಿ.ಪಿ ಯೋಗೇಶ್ವರ್ ಗೆಲುವು ಸಾಧಿಸುತ್ತಾರೆ ಎಂದು ಹೇಳಿದ್ದಾರೆ.
ಜಮೀರ್ ಹೇಳಿಕೆಯನ್ನು ವೈಯಕ್ತಿಕವಾಗಿ ನಾನು ಖಂಡಿಸುತ್ತೇನೆ. ಜೆಡಿಎಸ್ ನವರು ನನಗೆ ಮತ ಹಾಕಬೇಕು ಎಂದುಕೊಂಡಿದ್ದರು. ಆದರೆ, ಮತ್ತೆ ಒಂದಾಗಿ ಜೆಡಿಎಸ್ ಗೆ ಮತ ಹಾಕಿದ್ದಾರೆ. ಮುಸ್ಲಿಂ ಮತಗಳು ಒಂದು ಕಡೆ ಸೆಳೆದರೆ ಇನ್ನೊಂದು ಒಂದು ಸಮುದಾಯಕ್ಕೆ ನೋವಾಗಿ ಒಂದಿಷ್ಟು ನಷ್ಟವಾಗಿದೆ ಎಂದು ಸಿ.ಪಿ ಯೋಗೇಶ್ವರ್ ಹೇಳಿದ್ದಾರೆ. ಹೀಗಾಗಿ ಒಂದು ರೀತಿ ಗೆಲುವಿನ ಭರವಸೆ ಕಳೆದುಕೊಂಡಿದ್ದಾರೆ. ನವೆಂಬರ್ 23ರ ಫಲಿತಾಂಶ ಎಲ್ಲದಕ್ಕೂ ಉತ್ತರ ಕೊಡಲಿದೆ.