Ad imageAd image

ಸಿಎಂ ಅತಿಶಿ ಬಂಧನ ಸಾಧ್ಯತೆ: ಕೇಜ್ರಿವಾಲ್

Nagesh Talawar
ಸಿಎಂ ಅತಿಶಿ ಬಂಧನ ಸಾಧ್ಯತೆ: ಕೇಜ್ರಿವಾಲ್
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ನವದೆಹಲಿ(New Delhi): ದೆಹಲಿ ಮುಖ್ಯಮಂತ್ರಿ ಅತಿಶಿ ಶೀಘ್ರದಲ್ಲಿ ಬಂಧನ ಸಾಧ್ಯತೆ ಎಂದು ಆಪ್ ನಾಯಕ, ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ. ಈ ಕುರಿತು ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಅತಿಶಿ ಬಂಧನಕ್ಕೂ ಮೊದಲು ಆಪ್ ನಾಯಕರ ಮೇಲೆ ದಾಳಿ ನಡೆಯಲಿದೆ ಎನ್ನುವ ವಿಚಾರವನ್ನು ಪ್ರಸ್ತಾಪಿಸಿದ್ದಾರೆ.

ದೆಹಲಿಯಲ್ಲಿ ಜಾರಿಗೆ ತಂದಿರುವ ಮಹಿಳಾ ಸಮ್ಮಾನ್ ಹಾಗೂ ಸಂಜೀವಿನಿ ಎನ್ನುವ ಜನಪರ ಯೋಜನೆಗಳಿಂದ ಕೆಲವರು ಕಂಗಾಲಾಗಿದ್ದಾರೆ. ಇಂತಹ ಜನಪರ ಕಾರ್ಯಕ್ರಗಳಿಗೆ ಮುಂದಾಗಬಾರದು ಎನ್ನುತ್ತಾರೆ. ಹೀಗಾಗಿ ನಕಲಿ ಪ್ರಕರಣದಲ್ಲಿ ಮುಖ್ಯಮಂತ್ರಿ ಅತಿಶಿ ಬಂಧನವಾಗುವ ಸಾಧ್ಯತೆಯಿದೆ ಎಂದಿದ್ದಾರೆ. ಮಹಿಳಾ ಸಮ್ಮಾನ್ ಯೋಜನೆ ಅಡಿಯಲ್ಲಿ ತಿಂಗಳಿಗೆ 1 ಸಾವಿರ ರೂಪಾಯಿ ಪಡೆಯುತ್ತಿದ್ದಾರೆ. ಆಪ್ ಮತ್ತೆ ಅಧಿಕಾರಕ್ಕೆ ಬಂದರೆ 2,100 ರೂಪಾಯಿ ನೀಡಲಿದೆ. ಸಂಜೀವಿನಿ ಯೋಜನೆಯಡಿ 60 ವರ್ಷ ಹಾಗೂ ಅದಕ್ಕಿಂತ ಮೇಲ್ಪಟ್ಟವರಿಗೆ ಉಚಿತ ಆರೋಗ್ಯ ಸೇವೆ ನೀಡುವುದಾಗಿದೆ.

WhatsApp Group Join Now
Telegram Group Join Now
Share This Article