ಪ್ರಜಾಸ್ತ್ರ ಸುದ್ದಿ
ತುಮಕೂರು(Tumakoru): ಬಹುಕೋಟಿ ವಂಚನೆ(Fraud) ಪ್ರಕರಣದಲ್ಲಿ ನಗರದ ಬಸ್ ನಿಲ್ದಾಣದ ಹತ್ತಿರ ಆಕಾಶ ಜ್ಯುವಿಲೆರಿ(Jewellery) ಅಂಗಡಿ ಮಾಲೀಕ ಹಾಗೂ ಆತನ ಪತ್ನಿಯನ್ನು ಬೆಂಗಳೂರಿನಲ್ಲಿ ಪೊಲೀಸರು(Arrest) ಬಂಧಿಸಿದ್ದಾರೆ. ಶಿವಾನಂದಮೂರ್ತಿ ಹಾಗೂ ಪತ್ನಿ ಅನ್ನಪೂರ್ಣ ಬಂಧಿತರು. ಇವನ ಮಗ ಆಕಾಶ್ ವಿರುದ್ಧವೂ ದೂರು ದಾಖಲಾಗಿದೆ. ಜನವರಿ 29ರಿಂದ ಫೆಬ್ರವರಿ 2ರ ತನಕ 59 ದೂರುಗಳು ಇವರ ವಿರುದ್ಧ ದಾಖಲಾಗಿವೆ. 18 ಕೋಟಿ ರೂಪಾಯಿ ವಂಚಿಸಿರುವುದಾಗಿ ದೂರುಗಳಿಂದ ತಿಳಿದು ಬಂದಿದೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಚಿನ್ನದ ವ್ಯಾಪಾರ ಮಾಡುತ್ತಿದ್ದ ಶಿವಾನಂದಮೂರ್ತಿ, ಸಾರ್ವಜನಿಕರಿಗೆ, ಪರಿಚಯಸ್ಥರಿಗೆ ಚಿನ್ನದ ದರ ಕಡಿಮೆ ಇದ್ದಾಗ ಖರೀದಿಸಿ, ದರ ಹೆಚ್ಚಿಗೆ ಆದಾಗ ಮಾರಾಟ ಮಾಡಿ. ಇದರಿಂದ ಹೆಚ್ಚಿನ ಲಾಭ ಪಡೆಯಿರಿ ಎಂದು ಹೇಳಿದ್ದಾನೆ. ಇದಕ್ಕೆ ಚಿನ್ನದ ಅಂಗಡಿ ಠೇವಣಿ ಪತ್ರ ನೀಡುವುದಾಗಿ ಹೇಳಿ ಜನರಿಂದ ಹಣ ಪಡೆದಿದ್ದಾನೆ. ಇವನನ್ನು ನಂಬಿ ಜನರು ಹಣ ಹೂಡಿಕೆ ಮಾಡಿದ್ದಾರೆ. ಕೋಟಿ ಕೋಟಿ ಹಣ ಸಂಗ್ರಹವಾಗುತ್ತಿದ್ದಂತೆ ಪತ್ನಿ, ಮಗನೊಂದಿಗೆ ಪರಾರಿಯಾಗಿದ್ದ. ಈಗ ಪತಿ ಶಿವಾನಂದಮೂರ್ತಿ, ಪತ್ನಿ ಅನ್ನಪೂರ್ಣಳನ್ನು ಬಂಧಿಸಲಾಗಿದೆ.