ಪ್ರಜಾಸ್ತ್ರ ಸುದ್ದಿ
ವಾರಣಾಸಿ(Varanasi): ಛತ್ ಪೂಜೆ ನಿಮಿತ್ತ ಚೌಬೆಪುರ ಪ್ರದೇಶದ ಉಮರ್ಹ ಗ್ರಾಮದ ಅಂಕಿತಾ ಎನ್ನುವ ಮಹಿಳೆ ತನ್ನ ತವರೂರಾದ ಸೈದ್ಪುರದಲ್ಲಿರುವ ಬೌರ್ವನ ಗ್ರಾಮಕ್ಕೆ ಬಂದಿದ್ದಾಳೆ. ಕುಟುಂಬ ಸಮೇತ ಸೋಮವಾರ ಗಂಗಾನದಿಗೆ ಸ್ನಾನಕ್ಕೆ ಹೋಗಿದ್ದಾಳೆ. ಈ ವೇಳೆ ತನ್ನ 5 ವರ್ಷದ ಮಗಳು ತಾನ್ಯಳನ್ನು ಕರೆದುಕೊಂಡು ಹೋಗಿದ್ದಾಳೆ. ನದಿಯಲ್ಲಿ ಸ್ನಾನ ಮಾಡುವಾಗಿ ರೀಲ್ಸ್ ಮಾಡುತ್ತಿರುವಾಗ ಮಗು ಕೊಚ್ಚಿಕೊಂಡು ಹೋಗಿದೆ. ಅದು ಮತ್ತೊಂದು ಮೊಬೈಲ್ ನ ವಿಡಿಯೋದಲ್ಲಿ ಕಾಣಿಸಿದೆ. ಆದರೆ, ಇವರು ಗಮನಿಸದ ಪರಿಣಾಮ ಮಗು ಪ್ರಾಣ ಕಳೆದುಕೊಂಡಿದೆ.
गाजीपुर में 4 साल की बच्ची परिवार वालों के सामने ही डूब गई, मौसी मोबाइल में रील बनाती रही, आप ऐसी मौसी को क्या कहा जाए जो रियल बनाने में केवल लगी हुई थी और एक मासूम बच्ची डूब गई। @ghazipurpolice @Uppolice pic.twitter.com/gHcNdOgcG6
— Atul Kumar Yadav 🇮🇳 (@Atullive01) November 4, 2024
ಸುಮಾರು 2 ಗಂಟೆಗಳ ಹುಡುಕಾಟದ ಬಳಿಕ ಮಗುವಿನ ಮೃತದೇಹ ಪತ್ತೆಯಾಗಿದೆ. ಕುಟುಂಬಸ್ಥರೆಲ್ಲ ನದಿಯಲ್ಲಿ ಸ್ನಾನ ಮಾಡುತ್ತಲೇ ರೀಲ್ಸ್ ಮಾಡುವುದರಲ್ಲಿ ಮಗ್ನರಾಗಿದ್ದರಿಂದ ಏನೂ ಅರಿಯದ ಕೂಸು ಪ್ರಾಣ ಕಳೆದುಕೊಂಡಿದೆ. ರೀಲ್ಸ್ ಹುಚ್ಚಿಗೆ ಇಂತಹ ದುರಂತಗಳು ನಡೆಯುತ್ತಲೇ ಇದ್ದರೂ ಜನರು ಎಚ್ಚೆತ್ತುಕೊಳ್ಳದೆ ಇರುವುದು ನಿಜಕ್ಕೂ ದುರಂತವೇ ಸರಿ.