ಪ್ರಜಾಸ್ತ್ರ ಸುದ್ದಿ
ಇಂಪಾಲ್(Imphal): ಕೆರಾವೊ ಕುನೌ ಪ್ರದೇಶದಲ್ಲಿ ಇತ್ತೀಚೆಗೆ ಭದ್ರತಾ ಪಡೆ ದಾಳಿ ನಡೆಸಿದೆ. ಈ ವೇಳೆ ಶಸ್ತ್ರಾಸ್ತ್ರಗಳ ಜೊತೆಗೆ ಹಲವು ಇಂಟರ್ ನೆಟ್ ಉಪಕರಣಗಳನ್ನು ವಶಕ್ಕೆ ಪಡೆಯಲಾಗಿದೆ. ಇದರಲ್ಲಿ ಉದ್ಯಮಿ ಎಲಾನ್ ಮಸ್ಕ್ ಸಂಸ್ತೆಯ ಸ್ಟಾರ್ ಲಿಂಗ್ ಡಿವೈಸ್ ಎಂದು ವ್ಯಕ್ತಿಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ, ಭಯೋತ್ಪಾದಕರ ಸ್ಟಾರ್ ಲಿಂಕ್ ಬಳಕೆ ಮಾಡುತ್ತಿದ್ದಾರೆ. ಇದನ್ನು ತಡೆಯುವ ಕೆಲಸವನ್ನು ಮಸ್ಕ್ ಮಾಡುತ್ತಾರೆ ಎಂದು ನಂಬಿದ್ದೇನೆ ಎಂದು ಬರೆದಿದ್ದರು.
😯 @Starlink is being used by terrorists.
Hope, Elon @elonmusk looks into it and help control misuse of this technology. pic.twitter.com/mqNFcOnK3r
— Deepshikha (@i_am_dipshikha) December 17, 2024
ಈ ಬಗ್ಗೆ ಎಲಾನ್ ಮಸ್ಕ್ ಸ್ಪಷ್ಟನೆ ನೀಡಿದ್ದು, ಇದು ಸುಳ್ಳು. ಭಾರತದಲ್ಲಿ ಸ್ಟಾರ್ ಲಿಂಕ್ ಡಿವೈಸ್ ಬಂದ್ ಮಾಡಲಾಗಿದೆ ಎಂದಿದ್ದಾರೆ. ಭಾರತೀಯ ಅಧಿಕಾರಿಗಳು ಸಹ ಸ್ಟಾರ್ ಲಿಂಕ್ ಸೇವೆಗೆ ಭಾರತದಲ್ಲಿ ಪರವಾನಿಗೆ ಇಲ್ಲ ಎಂದಿದ್ದಾರೆ. ಎಲಾನ್ ಮಸ್ಕ್ ಸಂಸ್ಥೆ ಉಪಗ್ರಹ ಆಧರಿತ ಇಂಟರ್ ನೆಟ್ ಸೇವೆಯನ್ನು ನಡೆಯುತ್ತಿದೆ. ದಾಳಿಯ ವೇಳೆ ಭದ್ರತಾ ಪಡೆ ಇಂಟರ್ ನೆಟ್ ಸ್ಯಾಟ್ ಲೈಟ್ ರೂಟರ್, ಇಂಟರ್ ನೆಟ್ ಸ್ಯಾಟ್ ಲೈಟ್ ಎಂಟೆನಾ, ಎಫ್ ಟಿಪಿ ಕೇಬಲ್ ಸೇರಿ ಇತರೆ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಇದರಲ್ಲಿ ಸ್ಟಾರ್ ಲಿಂಕ್ ನ ಲೋಗೋ ಇರುವುದನ್ನು ವ್ಯಕ್ತಿಯೊಬ್ಬರು ಪತ್ತೆ ಹಚ್ಚಿ ಪೋಸ್ಟ್ ಮಾಡಿದ್ದರು.