ಪ್ರಜಾಸ್ತ್ರ ಸುದ್ದಿ
ರಾಮನಗರ(Ramanagara): ರಾಜ್ಯ ಸರ್ಕಾರದ ಹಗರಣಗಳ ವಿರುದ್ಧ ಮೈಸೂರು(Mysore) ತನಕ ಬಿಜೆಪಿ-ಜೆಡಿಎಸ್ ಪಾದಯಾತ್ರೆ ಹಮ್ಮಿಕೊಂಡಿದ್ದು ಇಂದು 2ನೇ ದಿನಕ್ಕೆ ಕಾಲಿಟ್ಟಿದೆ. ಶನಿವಾರ ಕೆಂಗೇರಿಯಿಂದ ಪಾದಯಾತ್ರೆಯನ್ನು(Padayatre) ಪ್ರಾರಂಭವಿಸಿತು. ರಾತ್ರಿ ಬಿಡದಿಯಲ್ಲಿ ವಿಶ್ರಾಂತಿ ಪಡೆದಿದ್ದು, ಇಲ್ಲಿಂದ ಭಾನುವಾರ ನಡಿಗೆ ಶುರುವಾಗಿದೆ. ಇಂದು ಸುಮಾರು 20 ಕಿಲೋ ಮೀಟರ್ ನಡೆಯಲಿದ್ದಾರೆ ಎಂದು ಹೇಳಲಾಗುತ್ತಿದೆ.
ರಾಮನಗರದ ಪದ್ಮಾವತಿ ದೇವಸ್ಥಾನದಲ್ಲಿ(Temple) ಮಧ್ಯಾಹ್ನದ ಊಟ ಮಾಡಲಿದ್ದಾರೆ. ರಾತ್ರಿ ಕೆಂಗಲ್ ನಲ್ಲಿ ತಂಗಲಿದ್ದಾರೆ. ಇಂದು ತಮಟೆ ಬಾರಿಸುವ ಮೂಲಕ ಹೆಚ್ಡಿಕೆ, ವಿಜಯೇಂದ್ರ ಚಾಲನೆ ನೀಡಿದರು. ಬಿಜೆಪಿ ಎಸ್ಸಿ ಮೋರ್ಚಾಗೆ 2ನೇ ದಿನದ ಪಾದಯಾತ್ರೆಯ ಜವಾಬ್ದಾರಿ ನೀಡಲಾಗಿದೆ. ಕಾಂಗ್ರೆಸ್ ನಾಯಕರ ವಿರುದ್ಧ ಬಿಜೆಪಿ, ಜೆಡಿಎಸ್ ನಾಯಕರು ವಾಗ್ದಾಳಿ ನಡೆಸುತ್ತಿದ್ದಾರೆ.