ಪ್ರಜಾಸ್ತ್ರ ಸುದ್ದಿ
ಬೆಳಗಾವಿ(Belagavi): ಡಿಸಿಸಿ(DCC Bank) ಬ್ಯಾಕ್ ಅಧ್ಯಕ್ಷ ಸ್ಥಾನಕ್ಕೆ ರಮೇಶ ಕತ್ತಿ ಶುಕ್ರವಾರ ಮಧ್ಯಾಹ್ನ ರಾಜೀನಾಮೆ ಸಲ್ಲಿಸಿದ್ದಾರೆ. ಏಕಾಏಕಿ ಬ್ಯಾಂಕ್ ಮ್ಯಾನೇಜರ್ ಗೆ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ. 6 ಬಾರಿ ಅಧ್ಯಕ್ಷರಾಗಿ(President) ಕಳೆದ 41 ವರ್ಷಗಳಿಂದ ಆಡಳಿತ ನಡೆಸುತ್ತಿದ್ದರು. ಇವರ ರಾಜೀನಾಮೆ ಕೆಲ ರಾಜಕೀಯ ಬೆಳವಣಿಗೆಗೆ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ. ಯಾಕಂದರೆ ಬ್ಯಾಂಕ್ ನಿರ್ದೇಶಕ, ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಹಾಗೂ ರಮೇಶ ಕತ್ತಿ ನಡುವೆ ತೆರೆಮರೆಯಲ್ಲಿ ಫೈಟ್ ನಡೆದಿತ್ತು.
ಅಧ್ಯಕ್ಷರನ್ನು ಹೊರಗೆಯಿಟ್ಟು ನಿರ್ದೇಶಕರು ಸಭೆ ನಡೆಸಿದ್ದರಂತೆ. ಚಿಕ್ಕೋಡಿ, ನಿಪ್ಪಾಣಿ ಭಾಗದಲ್ಲಿ ಬ್ಯಾಂಕಿಗೆ ಹೊಸ ಸದಸ್ಯರನ್ನು ನೇಮಕ ಮಾಡುವ ವಿಚಾರ ಸಂಬಂಧ ಎಲ್ಲ 14 ನಿರ್ದೇಶಕರ ವಿರೋಧವಿದ್ದು, ಅಧ್ಯಕ್ಷರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ಸಿದ್ದರಾಗಿದ್ದರಂತೆ. ಇದನ್ನು ಅರಿತೆ ರಮೇಶ(Ramesh Katti) ಕತ್ತಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ ಎಂದು ಹೇಳಲಾಗುತ್ತಿದೆ.