ಪ್ರಜಾಸ್ತ್ರ ಸುದ್ದಿ
ಕೊಲ್ಕತ್ತಾ(Kolkata): ಇಲ್ಲಿನ ಸರ್ಕಾರಿ ಸ್ವಾಯತ್ತದ ಆರ್.ಜೆ ಕಾರ್ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಆಸ್ಪತ್ರೆಯಲ್ಲಿ ತರಬೇತಿ ವೈದ್ಯೆಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ದೋಷಿ ಸಂಜಯ್ ರಾಯ್ ಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಶುಕ್ರವಾರ ಅಪರಾಧಿ ಎಂದು ಸಾಬೀತು ಆಗಿತ್ತು. ಶಿಕ್ಷೆಯ ಪ್ರಕಟಣೆಯನ್ನು ಸೋಮವಾರ ಕಾಯ್ದಿರಿಸಿದ್ದ ಸಿಯಾಲಹದ ಕೋರ್ಟ್ ಜೀವಾವಧಿ ಶಿಕ್ಷೆ ನೀಡಿದೆ. ಅಲ್ಲಿಗೆ ಇಡೀ ರಾಷ್ಟ್ರವ್ಯಾಪಿ ನಡೆಸಿದ ಹೋರಾಟಕ್ಕೆ ಒಂದು ಜಯ ಸಿಕ್ಕಂತಾಗಿದೆ.
ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 103(1)ರ ಅಡಿಯಲ್ಲಿ ಶಿಕ್ಷೆ ನೀಡಲಾಗಿದೆ. 50 ಸಾವಿರ ರೂಪಾಯಿ ದಂಡ ವಿಧಿಸಲಾಗಿದೆ. ರಾಜ್ಯ ಸರ್ಕಾರವು ಸಂತ್ರಸ್ತೆಯ ಕುಟುಂಬಕ್ಕೆ 17 ಲಕ್ಷ ರೂಪಾಯಿ ಪರಿಹಾರ ನೀಡಬೇಕೆಂದು ಕೋರ್ಟ್ ಸೂಚಿಸಿದೆ. ಕಳೆದ ಆಗಸ್ಟ್ 9ರಂದು ಈ ಘಟನೆ ನಡೆದಿದೆ. ಸಂಜಯ್ ರಾಯ್ ದೋಷಿ ಎಂದು ಸಾಬೀತಾಗಿ ಶಿಕ್ಷೆ ಪ್ರಕಟಿಸಲಾಗಿದೆ.