ಪ್ರಜಾಸ್ತ್ರ ಸುದ್ದಿ
ಮೈಸೂರು(Mysore): ಉಳ್ಳವರು ಏನೂ ಮಾಡಿದರೂ ಚಂದ ಎನ್ನುವಂತೆ ಎಲ್ಲೆಡೆ ರೇವ್(ರಾತ್ರಿಪೂರ್ತಿ ಕುಡಿತ, ಕುಣಿತ) ಪಾರ್ಟಿ ಜೋರಾಗುತ್ತದೆ. ಕಾನೂನು ಬಾಹಿರವಾಗಿ ಇದೀಗ ಮೈಸೂರಿನಲ್ಲಿ ರೇವ್(Reva Party) ಪಾರ್ಟಿ ನಡೆಸಿರುವುದು ಕಂಡು ಬಂದಿದೆ. ಪೊಲೀಸರು ದಾಳಿ ನಡೆಸಿ 150ಕ್ಕೂ ಹೆಚ್ಚು ಯುವಕ, ಯುವತಿಯರನ್ನು ವಶಕ್ಕೆ ಪಡೆದಿದ್ದಾರೆ. ಕೆಆರ್ ಎಸ್ ಬ್ಯಾಕ್(KRS Back Water) ವಾಟರ್ ಭಾಗದಲ್ಲಿ ರೇವ್ ಪಾರ್ಟಿ ನಡೆಸಲಾಗಿದೆ. ಅಲ್ಲಿಗೆ ಪೊಲೀಸರು ದಾಳಿ ಮಾಡಿದ್ದಾರೆ.
ಡಿವೈಎಸ್ಪಿ ಕರೀಂ ತಂಡ ಪಾರ್ಟಿ ನಡೆಯುತ್ತಿದ್ದ ಸ್ಥಳದ ಮೇಲೆ ದಾಳಿ ನಡೆಸಿದ್ದಾರೆ. ಈ ವೇಳೆ ತಪ್ಪಿಸಿಕೊಳ್ಳಲು ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾರಂತೆ. ಪಾರ್ಟಿ ಜಾಗದಲ್ಲಿ ಮದ್ಯದ ಬಾಟಲ್ ಗಳು, ಸಿಗರೇಟ್ ಪತ್ತೆಯಾಗಿವೆ. ಮಾದಕ ದ್ರವ್ಯಗಳು ಪತ್ತೆಯಾಗಿಲ್ಲ. ಎಲ್ಲರ ರಕ್ತದ ಮಾದರಿ ಪರೀಕ್ಷೆ ನಡೆಸಿದ್ದು ವರದಿ ಬಂದ ಬಳಿಕ ತಿಳಿಯಲಿದೆ. ಎಫ್ಎಸ್ಎಲ್(FSL) ತಂಡ ಸಹ ಸ್ಥಳಕ್ಕೆ ಭೇಟಿ ನೀಡಿದೆ. ರೇವ್ ಪಾರ್ಟಿ ಹೆಸರಲ್ಲಿ ರಾತ್ರಿಪೂರ್ತಿ ಮದ್ಯ ಸೇವನೆ, ಸಿಗರೇಟ್ ಹಾಗೂ ಡ್ರಗ್ಸ್ ಸೇವನೆ ಸಹ ನಡೆಯುತ್ತದೆ. ಈ ಹಿಂದೆ ಹಲವು ಪ್ರಕರಣಗಳು ನಡೆದಿವೆ. ಇದರಲ್ಲಿ ಉದ್ಯಮಿಗಳ ಮಕ್ಕಳು, ರಾಜಕಾರಣಿಗಳ ಮಕ್ಕಳು, ಸಿನಿಮಾ ನಟ, ನಟಿಯರು ಭಾಗಿಯಾಗುವುದರಿಂದ ಪ್ರಕರಣಗಳು ಬೆಳಕಿಗೆ ಬಂದಷ್ಟು ವೇಗದಲ್ಲಿಯೇ ಮುಚ್ಚಿ ಹೋಗುತ್ತವೆ.