ಪ್ರಜಾಸ್ತ್ರ ಸುದ್ದಿ
ಇವತ್ತಿನ ದಿನದಲ್ಲಿ ರೀಲ್ಸ್(reels) ಹುಚ್ಚು ಎಷ್ಟರ ಮಟ್ಟಿಗಿದೆ ಎಂದರೆ ಎಲ್ಲಿ ಬೇಕಾದರೆ ಹೇಗೆ ಬೇಕಾದರೂ ಡ್ಯಾನ್ಸ್, ಡೈಲಾಗ್ ಹೇಳುತ್ತಾ ಕುಣಿಬಹುದು. ಪ್ರಚಾರದ ಗುಂಗಿನಲ್ಲಿ ಮಾನವೀಯತೆ ಕಳೆದುಕೊಳ್ಳುತ್ತಿದ್ದಾರೆ. ಸಂಬಂಧಗಳನ್ನು ಕಾಲ ಕಸವಾಗಿ ನೋಡುತ್ತಿದ್ದಾರೆ. ಇಲ್ಲೊಬ್ಬ ಪುಣ್ಯಾತ್ಮ ತನ್ನ ರೀಲ್ಸ್ ಹುಚ್ಚಿಗೆ ಹೆಣವನ್ನು(Dead Body) ಬಿಟ್ಟಿಲ್ಲ. ತಮ್ಮರನ್ನು ಕಳೆದುಕೊಂಡ ಕುಟುಂಬಸ್ಥರು, ಸಂಬಂಧಿಕರು ದುಃಖದಲ್ಲಿದ್ದರೆ ಇವನು ರೀಲ್ಸ್ ಮಾಡಿ ಮೊಸಳೆ ಕಣ್ಣೀರು ಹಾಕಿದ್ದಾನೆ.
अर्थी के साथ भी रील
pic.twitter.com/k6OQsMxh6u
— SANJAY TRIPATHI (@sanjayjourno) September 6, 2024
ಸಂಜಯ್ ತ್ರಿಪಾಠಿ ಎಂಬುವರನ್ನು ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಸೆಪ್ಟೆಂಬರ್ 6ರಂದು ಈ ವಿಡಿಯೋ ಹಂಚಿಕೊಳ್ಳಲಾಗಿದೆ. 2 ಲಕ್ಷಕ್ಕೂ ಅಧಿಕ ಜನರು ಇದನ್ನು ನೋಡಿದ್ದಾರೆ. ಆತನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಲೈಕ್ಸ್, ವೀವ್ಸ್, ಕಾಮೆಂಟ್ಸ್ ಗಳ ಲೋಕದಲ್ಲಿ ಇಲ್ಲಿ ಜೀವಕ್ಕೂ ಬೆಲೆ ಕೊಡದೆ ಹೋಗ್ತಿರುವುದು ನಿಜಕ್ಕೂ ದುರಂತವೇ ಸರಿ.