ಪ್ರಜಾಸ್ತ್ರ ಸುದ್ದಿ
ಹಾಸನ(Hasana): ಹೊಳೆನರಸೀಪುರ ನರ್ಸಿಂಗ್ ಕಾಲೇಜಿನಲ್ಲಿ ಗಡ್ಡದ(Beard Problem) ವಿಚಾರ ಸಂಬಂಧ ವಿದ್ಯಾರ್ಥಿಗಳು ಹಾಗೂ ಆಡಳಿತ ಮಂಡಳಿ ನಡುವೆ ಒಂದಿಷ್ಟು ಸಮಸ್ಯೆ ಉಂಟಾಗಿತ್ತು. ಕೆಲ ಮುಸ್ಲಿಂ ವಿದ್ಯಾರ್ಥಿಗಳು ಗಡ್ಡ ಟ್ರಿಮ್ ಮಾಡಿಕೊಳ್ಳಬೇಕು ಅನ್ನೋದನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದಾರಂತೆ. ಈಗ ಈ ಸಮಸ್ಯೆ ಬಗೆಹರಿದಿದೆ. ಕಾಲೇಜಿನ ಆಡಳಿತ ಮಂಡಳಿ ಹಾಗೂ ವಿದ್ಯಾರ್ಥಿಗಳು ಮಾತಕತೆ ನಡೆಸಿದ್ದು, ಕಾಲೇಜಿನ ಶಿಸ್ತು ಹಾಗೂ ನಿಯಮಗಳನ್ನು ಪಾಲಿಸುವುದಾಗಿ ವಿದ್ಯಾರ್ಥಿಗಳು ಒಪ್ಪಿಕೊಂಡಿದ್ದಾರೆ.
ಜಮ್ಮು ಕಾಶ್ಮೀರದಿಂದ ಬಂದಿರುವ ಉಮರ್ ಎನ್ನುವ ವಿದ್ಯಾರ್ಥಿ ಮಾತನಾಡಿದ್ದು, ಇದನ್ನು ಇಲ್ಲಿಗೆ ಕೈ ಬಿಡುತ್ತಿದ್ದೇವೆ. ಪ್ರಾಂಶುಪಾಲರು, ಕಾಲೇಜು ಆಡಳಿತ ಮಂಡಳಿ ಸೂಚನೆಯಂತೆ ನಡೆದುಕೊಳ್ಳುತ್ತೇವೆ. ವಿದ್ಯಾಭ್ಯಾಸಕ್ಕೆ ತೊಂದರೆಯಾಗುವುದಿಲ್ಲ ಎಂದಿದ್ದಾರೆ. ಗಡ್ಡ ಟ್ರಿಮ್ ಮಾಡಲು ಹೇಳಿದ್ದು ಬಿಟ್ಟರೆ ಏನೂ ಸಮಸ್ಯೆಯಿಲ್ಲ ಎಂದಿದ್ದಾನೆ. ಕಾಲೇಜಿನಲ್ಲಿ ಎಲ್ಲರೂ ಗಡ್ಡವನ್ನು ಟ್ರಿಮ್ ಮಾಡಿಕೊಂಡು ಬರಬೇಕು. ನೀವು ನರ್ಸಿಂಗ್(Nursing Students) ವಿದ್ಯಾರ್ಥಿಗಳು. ರೋಗಿಗಳ ಸೇವೆ ಮಾಡಲು ಹೋಗುವವರು. ಅವರ ಬಳಿ ನೀವು ಹೋದರೆ ಚಿಕಿತ್ಸೆ ನೀಡುತ್ತಾರೆ ಎನ್ನುವ ಭಾವನೆ ಮೂಡಬೇಕು. ಹೀಗಾಗಿ ಗಡ್ಡ ಟ್ರಿಮ್ ಮಾಡಿಕೊಂಡು ಬರಲು ಎಲ್ಲ ವಿದ್ಯಾರ್ಥಿಗಳಿಗೆ ಹೇಳಿದ್ದರು. ಆದರೆ, ಕೆಲಸ ಮುಸ್ಲಿಂ ವಿದ್ಯಾರ್ಥಿಗಳು ಇದನ್ನು ತಪ್ಪಾಗಿ ಅರ್ಥೈಸಿಕೊಂಡು ಸಮಸ್ಯೆ ಮಾಡಿಕೊಂಡಿದ್ದರಂತೆ. ಈಗ ಎಲ್ಲ ಬಗೆಹರಿದಿದೆ.