ಪ್ರಜಾಸ್ತ್ರ ಸುದ್ದಿ
ಲಖನೌ(Lucknow): ಚಲಿಸುತ್ತಿದ್ದ ರೈಲಿನಿಂದ ಬಾಲಕಿಯೊಬ್ಬಳು ಬಿದ್ದ ಘಟನೆ ಉತ್ತರ ಪ್ರದೇಶದ ಲಲಿತ್ ಪುರ ರೈಲು ನಿಲ್ದಾಣದ ವ್ಯಾಪ್ತಿಯಲ್ಲಿ ನಡೆದಿದೆ. ಮಗಳ ಬಿದ್ದಿದ್ದು ಕಂಡ ತಂದೆ ಸುಮಾರು 16 ಕಿಲೋ ಮೀಟರ್ ಹಿಂದಕ್ಕೆ ಓಡಿ ಹೋಗಿ ಪೋದೆಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಮಗಳನ್ನು ಪತ್ತೆ ಹಚ್ಚಿದ ಮನಮಿಡಿಯುವ ಘಟನೆ ನಡೆದಿದೆ. ಅರವಿಂದ್ ಎಂಬುವರ ಗೌರಿ ಎನ್ನುವ ಮಗಳು ರೈಲಿನ ಎಮರ್ಜೆನ್ಸಿ ಕಿಟಕಿಯಿಂದ ಆಕಸ್ಮಿಕವಾಗಿ ಬಿದ್ದಿದ್ದಾಳೆ.
ಕುರುಕ್ಷೇತ್ರದಿಂದ(Kurukshetra-Mathura) ಮಥುರಾಕ್ಕೆ ಅರವಿಂದ್ ಎಂಬುವರು ಮಗಳು ಗೌರಿಯೊಂದಿಗೆ ಹೊರಟಿದ್ದರು. ಎಮರ್ಜೆನ್ಸಿ(Emergency Window) ಕಿಟಿಕಿಯನ್ನು ಇತರೆ ಪ್ರಯಾಣಿಕರು ಗಾಳಿ ಬರಲೆಂದು ತೆಗೆದಿದ್ದಾರೆ. ಈ ವೇಳೆ ಅಚಾನಕ್ ಆಗಿ ಬಾಲಕಿ ಕಿಟಕಿಯಿಂದ ಹೊರಗೆ ಬಿದ್ದಿದ್ದಾಳೆ. ಕೂಡಲೇ ತಂದೆ ತುರ್ತು ಚೈನ್ ಎಳೆದಿದ್ದಾರೆ. ಟ್ರೇನ್ 16 ಕಿಲೋ ಮೀಟರ್ ಮುಂದೆ ಹೋಗಿ ನಿಂತಿದೆ. ವಿಷಯ ತಿಳಿಸಿದ್ದಾರೆ. 112ಗೆ ಕಾಲ್ ಮಾಡಿದ್ದಾರೆ. ಪೊಲೀಸರು, ರೈಲ್ವೆ ಪ್ರೊಟೆಕ್ಷನ್ ಪೋರ್ಸ್ ಸೇರಿ ಬಾಲಕಿ(Girl) ಹುಡುಕಾಟ ನಡೆಸಿದ್ದಾರೆ.
ಪೊಲೀಸರು ಮೂರು ತಂಡ ಮಾಡಿ ಹುಡುಕಾಟ ನಡೆಸಿದ್ದಾರೆ. ತಂದೆ ರಾತ್ರಿ ವೇಳೆ ಬೆಳಕು ಇಲ್ಲದೆ ಓಡಿದ್ದಾರೆ. ಸುಮಾರು 16 ಕಿಲೋ ಮೀಟರ್ ಓಡಿ ಓಡಿ ಹುಡುಕಾಟ ನಡೆಸಿದ್ದಾರೆ. ವಿರಾರಿ ಸ್ಟೇಷನ್ ಹತ್ತಿರ ಪೋದೆಯಲ್ಲಿ ಬಾಲಕಿ ಗೌರಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದಾಳೆ. ಮಗಳನ್ನು ಪತ್ತೆ ಹಚ್ಚಿ ಎತ್ತುಕೊಂಡು ಅತ್ತಿದ್ದಾರೆ. ನಂತರ ಪೊಲೀಸರು ಬಂದು ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಶುಕ್ರವಾರ ರಾತ್ರಿ ಈ ಘಟನೆ ನಡೆದಿದೆ. ಮಗು ಚೇತರಿಸಿಕೊಳ್ಳುತ್ತಿದೆ. ಈ ಘಟನೆ ಎಲ್ಲರ ಮನಮಿಡಿದಿದೆ.