ಪ್ರಜಾಸ್ತ್ರ ಸುದ್ದಿ
ನವಲಗುಂದ(Navalagunda): ತಮ್ಮ 3 ವರ್ಷದ ಮಗನ ಸಾವು ಸಹಜವಲ್ಲ ಎಂದು ತಾಯಿ ಅನುಮಾನ ವ್ಯಕ್ತಪಡಿಸಿದ ಹಿನ್ನಲೆಯಲ್ಲಿ ಪೊಲೀಸರು ಅಂತ್ಯಸಂಸ್ಕಾರ ಮಾಡಿದ ಶವವನ್ನು ಪರೀಕ್ಷೆಗಾಗಿ ಹೊರತಗೆಯುವ ಕೆಲಸ ಮಾಡಿದ ಘಟನೆ, ಧಾರವಾಡ ಜಿಲ್ಲೆ ನವಲಗುಂದ ತಾಲೂಕಿನ ಯಮನೂರಿನಲ್ಲಿ ನಡೆದಿದೆ. ನವೆಂಬರ್ 8ರಂದು ವೆಂಕಪ್ಪ ಹಾಗೂ ಶಾಂತಾ ದಂಪತಿಯ 3 ವರ್ಷದ ಮಗ ಯಲ್ಲಪ್ಪ ಮೃತಪಟ್ಟಿದ್ದಾನೆ.
ಹಿತ್ತಲ ಹತ್ತಿರ ಆಡುವಾಗ ಕಬ್ಬಿಣದ ಬಂಡ್ ಫಾರ್ಮ್ ಬಿದ್ದು ಮಗು ಮೃತಪಟ್ಟಿದೆ ಎಂದು ಪಕ್ಕದ ಮನೆಯ ನಾಗಲಿಂಗ ಜೋಗಿ ಹೇಳಿದ್ದಾರಂತೆ. ಮಗನ ಶವ ಸಂಸ್ಕಾರ ನಡೆದ ಬಳಿಕ ನಾಗಲಿಂಗ ಜೋಗಿ ನಾಪತ್ತೆಯಾಗಿದ್ದು, ಮಗನ ಸಾವಿನ ಬಗ್ಗೆ ಸಂಶಯವಿದೆ. ಈ ಬಗ್ಗೆ ತನಿಖೆ ಮಾಡಬೇಕೆಂದು ತಾಯಿ ಶಾಂತಾ ಹೇಳಿದ್ದಾರೆ. ಹೀಗಾಗಿ ತಹಶೀಲ್ದಾರ್, ಪಿಎಸ್ಐ ಅವರ ಸಮ್ಮುಖದಲ್ಲಿ ಶವ ಹೊರ ತೆಗೆಯುವ ಕೆಲಸ ನಡೆಯಿತು.