ಪ್ರಜಾಸ್ತ್ರ ಸುದ್ದಿ
ವಯನಾಡು(Wayanad): ಮಂಗಳವಾರ ನಸುಕಿನ ಜಾವ ಸಂಭವಿಸಿದ ಭೂಕುಸಿತದಲ್ಲಿ 49 ಜನರು ಮೃತಪಟ್ಟಿರುವ ಘಟನೆ ಕೇರಳದ(Kerala) ವಾಯನಾಡು ಜಿಲ್ಲೆಯಲ್ಲಿ ನಡೆದಿದೆ. ಕ್ಷಣ ಕ್ಷಣಕ್ಕೂ ಸಾವಿನ ಸಂಖ್ಯೆ ಏರಿಕೆಯಾಗುತ್ತಲೇ ಇದೆ. ಎನ್ ಡಿಆರ್ ಎಫ್(NDRF) ತಂಡ ಈಗ 49 ಮೃತದೇಹಗಳನ್ನು ಹೊರ ತೆಗೆದಿದ್ದು, ಇನ್ನು ನೂರಾರು ಮಂದಿ ಸಿಲುಕಿರುವ ಶಂಕೆ ಇದೆ. ಹೀಗಾಗಿ ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಯಿದೆ.
ಮೆಪ್ಪಾಡಿ, ಚೂರಲ್ಮಲಾ, ಪೊಥುಕಲ್, ತೊಂಡೇರ್ನಾಡು ಭಾಗದಲ್ಲಿ ಅಪಾರ ಪ್ರಮಾಣದಲ್ಲಿ ಭೂಕಸಿತವಾಗಿದೆ. ಹೀಗಾಗಿ ಕೆಲ ಹಳ್ಳಿಗಳೇ ಇದಕ್ಕೆ ತುತ್ತಾಗಿವೆ. ಘಟನೆಯಲ್ಲಿ ಗಾಯಗೊಂಡಿರುವ 70ಕ್ಕೂ ಹೆಚ್ಚು ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ರಾಜ್ಯ ಹಾಗೂ ಕೇಂದ್ರ ಸರ್ಕಾರದಿಂದ ಎಲ್ಲ ರೀತಿಯ ರಕ್ಷಣಾ ಕಾರ್ಯ ನಡೆದಿದೆ. ಇನ್ನು ಬೆಂಗಳೂರಿನಿಂದಲೂ(Bengaloru) ಎನ್ ಡಿಆರ್ ಎಫ್ ನ 30 ಸದಸ್ಯರ ತಂಡ ವಾಯನಾಡಿನತ್ತ ಪ್ರಯಾಣ ಬೆಳೆಸಿದೆ.