ನಾವು ಎನ್ ಡಿಎ ಜೊತೆಗೆ ಇರುತ್ತೇವೆ: ಚಂದ್ರಬಾಬು ನಾಯ್ಡು

88

ಪ್ರಜಾಸ್ತ್ರ ಸುದ್ದಿ

ಅಮರಾವತಿ: ಟಿಡಿಪಿ ನಾಯಕ ಚಂದ್ರಬಾಬು ನಾಯ್ಡು ಲೋಕಸಭಾ ಚುನಾವಣೆ ಫಲಿತಾಂಶಕ್ಕೆ ಸಂಬಂಧಿಸಿದಂತೆ ಮಾತನಾಡಿದ್ದು, ನಾವು ಎನ್ ಡಿಎ ಜೊತೆಗೆ ಇರುತ್ತೇವೆ. ಇಂದು ನಡೆಯುವ ಸಭೆಗೆ ಹೋಗುತ್ತೇವೆ ಎಂದಿದ್ದಾರೆ.

ನಾನು ಸಾಕಷ್ಟು ರಾಜಕೀಯ ಅನುಭವ ಹೊಂದಿದ್ದೇನೆ. ಹಲವು ರಾಜಕೀಯ ಬದಲಾವಣೆಗಳನ್ನು ನೋಡಿದ್ದೇನೆ. ಎನ್ ಡಿಎದಲ್ಲಿ ಇದ್ದೇನೆ. ಸಭೆಗೆ ಹಾಜರಾಗುತ್ತೇನೆ ಅಂತಾ ಹೇಳಿದ್ದಾರೆ.

ಲೋಕಸಭೆಯ ಜೊತೆಗೆ ವಿಧಾನಸಭಾ ಚುನಾವಣೆ ಸಹ ಆಂಧ್ರದಲ್ಲಿ ನಡೆದಿದೆ. 175 ವಿಧಾನಸಭಾ ಕ್ಷೇತ್ರಗಳಿವೆ. 144 ಕಡೆ ಸ್ಪರ್ಧಿಸಿದ್ದ ತೆಲುಗು ದೇಶಂ ಪಕ್ಷ ಬರೋಬ್ಬರಿ 133 ಸ್ಥಾನ ಗೆಲ್ಲುವ ಮೂಲಕ ಸ್ಪಷ್ಟ ಬಹುಮತ ಪಡೆದಿದೆ. ಪವನ್ ಕಲ್ಯಾಣ್ ನಾಯಕತ್ವದ ಜನಸೇನಾ ಪಕ್ಷದ 21 ವಿಧಾನಸಭೆಯಲ್ಲಿ ಗೆದ್ದಿದೆ.

 2019ರಲ್ಲಿ ಜಗನ್ ಮೋಹನ್ ರೆಡ್ಡಿ ನೇತೃತ್ವದ ವೈಎಸ್ಆರ್ ಸಿಪಿ 151 ಕ್ಷೇತ್ರಗಳಲ್ಲಿ ಗೆದ್ದು ಬೀಗಿತ್ತು. ಈ ಬಾರಿ ಕೇವಲ 11ಕ್ಕೆ ಸ್ಥಾನಕ್ಕೆ ಬರುವ ಮೂಲಕ ಹೀನಾಯ ಸೋಲು ಕಂಡಿದೆ. ಬಿಜೆಪಿ 8ರಲ್ಲಿ ಗೆದ್ದಿದೆ.

ಇನ್ನು ಲೋಕಸಭೆಯ 25 ಸ್ಥಾನಗಳಲ್ಲಿ 21ರಲ್ಲಿ ಸ್ಪರ್ಧಿಸಿದ್ದ ಟಿಡಿಪಿ 16ರಲ್ಲಿ ಗೆದ್ದಿದೆ. 2 ರಲ್ಲಿ ಸ್ಪರ್ಧಿಸಿದ ಜನಸೇನೆ ಎರಡರಲ್ಲೂ ಜಯಸಿದೆ. ವೈಎಸ್ಆರ್ ಸಿಪಿ 4, ಬಿಜೆಪಿ 3ರಲ್ಲಿ ಜಯ ಸಾಧಿಸಿವೆ.




error: Content is protected !!