ಪ್ರಜಾಸ್ತ್ರ ಸುದ್ದಿ
ಸ್ಯಾಂಡಲ್ ವುಡ್ ಅಂಗಳದ ಡಾಲಿ ನಟ ಧನಂಜಯ್ ಸಿಂಪಲ್ ಆಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ತಮ್ಮ ಹುಟ್ಟೂರಾದ ಹಾಸನ ಜಿಲ್ಲೆ ಅರಸೀಕೆರೆ ತಾಲೂಕಿನ ಕಾಳೇನಹಳ್ಳಿಯಲ್ಲಿ ನಿಶ್ಚಿತಾರ್ಥ ನಡೆದಿದೆ. ವೃತ್ತಿಯಲ್ಲಿ ವೈದ್ಯೆಯಾಗಿರುವ ಡಾ.ಧನ್ಯತಾ ಜೊತೆಗೆ ಡಾಲಿ ಎಂಗೇಜ್ ಆಗಿದ್ದಾರೆ. ಸರಳವಾಗಿ ನಡೆದ ಸಮಾರಂಭದಲ್ಲಿ ಕುಟುಂಬಸ್ಥರು ಮಾತ್ರ ಭಾಗವಹಿಸಿದ್ದರು. ಫೆಬ್ರವರಿ 16, 2025ರಂದು ಮೈಸೂರನಲ್ಲಿ ಮದುವೆ ನಡೆಯಲಿದೆ. ನಟ ಧನಂಜಯ್ ಬರೀ ಕನ್ನಡದಲ್ಲಿ ಮಾತ್ರವಲ್ಲ ಸೌಥ್ ಸಿನಿ ಅಂಗಳದಲ್ಲಿಯೂ ಬ್ಯುಸಿಯಾಗಿದ್ದಾರೆ. ನಟನೆಯ ಜೊತೆಗೆ ನಿರ್ಮಾಪಕ, ಗೀತರಚನೆಕಾರರು ಸಹ ಆಗಿದ್ದಾರೆ.