ಪ್ರಜಾಸ್ತ್ರ ಸುದ್ದಿ
ಇಂದೋರ್(Indore): ಇವತ್ತಿನ ಕಾಲದಲ್ಲಿ ಕೆಲವೊಮ್ಮೆ ಯಾವುದೆಕ್ಕಲ್ಲ ಪ್ರತಿಭಟನೆ ನಡೆಸುತ್ತಾರೆ ಅನ್ನೋದು ವಿಚಿತ್ರವಾಗಿದೆ. ಅನಾವಶ್ಯಕವಾಗಿ ಬೀದಿಗಿಳಿದು ಬಿಡುತ್ತಾರೆ. ಇಂತಹದ್ದೇ ಘಟನೆಯೊಂದು ಮಧ್ಯಪ್ರದೇಶದ ಇಂದೋರ್ ನಲ್ಲಿ ನಡೆದಿದೆ. ನಮಗೆ ಗಡ್ಡವಿಲ್ಲದ ಹುಡುಗರು ಬೇಕು. ನೋ ಕ್ಲೀನ್ ಸೇವ್.. ನೋ ಲವ್..(ಗಡ್ಡ ಇದ್ದರೆ ಪ್ರೀತಿ ಇಲ್ಲ), ಬಿಯರ್ಡ್ ಹಠಾವೋ ಯಾ ಗರ್ಲ್ ಫ್ರೆಂಡ್ ಬುಲ್ ಜಾ(ಗಡ್ಡ ತೆಗೆಯಿರಿ ಇಲ್ಲ ಗೆಳತಿಯನ್ನು ಮರೆಯಿರಿ), ಬಿಯರ್ಡ್ ಹಠಾವೋ ಪ್ಯಾರ್ ಬಚಾವೊ(ಗಡ್ಡ ತೆಗೆಯಿರಿ ಪ್ರೀತಿ ಉಳಿಸಿ) ಹೀಗೆ ವಿಚಿತ್ರವಾಗಿ ಬರೆದ ಬೋರ್ಡ್ ಹಿಡಿದುಕೊಂಡು ಪ್ರತಿಭಟನೆ ನಡೆಸಿದರು.
ನಗರದಲ್ಲಿ ರ್ಯಾಲಿ ನಡೆಸಿದ ಹುಡುಗಿಯರು ಮುಖಕ್ಕೆ ಗಡ್ಡ ಅಂಟಿಸಿಕೊಂಡು ಈ ರೀತಿಯಾಗಿ ಬೋರ್ಡ್ ಹಿಡಿದುಕೊಂಡ ಹೊರಟಿರುವುದನ್ನು ನೋಡಿದ ಜನರು ಅಚ್ಚರಿಪಟ್ಟರು. ಇದು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ. ಈ ಬಗ್ಗೆ ಸಾರ್ವಜನಿಕರು ವಿವಿಧ ರೀತಿಯಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಆದರೆ, ಇಲ್ಲಿ ವೈಯಕ್ತಿಕ ವಿಚಾರ ಯಾವುದು ಸಾರ್ವಜನಿಕ ವಿಚಾರ ಯಾವುದು ಅನ್ನೋದು ಅರಿಯದ ಕೆಲ ಅಪ್ರಬುದ್ಧರು ಮಾಡುವ ಕೆಲಸವೆಂದು ಮಾತ್ರ ಹೇಳಬಹುದು.