ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಚನ್ನಪಟ್ಟಣ ವಿಧಾನಸಭಾ ಉಪಚುನಾವಣೆ(By Election) ಪ್ರಚಾರದ ವೇಳೆ ಸಚಿವ ಜಮೀರ್ ಅಹ್ಮದ್, ಕೇಂದ್ರ ಸಚಿವ, ಜೆಡಿಎಸ್ ನಾಯಕ ಕುಮಾರಸ್ವಾಮಿಯನ್ನು ಕರಿಯ, ದೇವೇಗೌಡರ ಕುಟುಂಬವನ್ನು ಖರೀದಿಸ್ತೀವಿ ಎಂದು ಹೇಳಿದ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಯ್ತು. ಆಕ್ರೋಶ ಕೂಡ ವ್ಯಕ್ತವಾಗುತ್ತಿದೆ. ಈ ಹೇಳಿಕೆಯಿಂದ ಒಕ್ಕಲಿಗ ಮತಗಳು ಕೈ ತಪ್ಪಿರಬಹುದು ಎನ್ನುವ ಮಾತುಗಳನ್ನು ಸ್ವತಃ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ ಯೋಗೇಶ್ವರ್(CPY) ಹೇಳಿದ್ದಾರೆ. ಇದರ ನಡುವೆ ಕಾಂಗ್ರೆಸ್ ನಾಯಕ ರಮೇಶ ಬಂಡಿಸಿದ್ದೇಗೌಡ(Ramesha Bandisiddegowda) ಹೊಸ ಬಾಂಬ್ ಸಿಡಿಸಿದ್ದಾರೆ.
ಜಮೀರ್(Zameer Ahmed Khan) ಅಹ್ಮದ್, ಕುಮಾರಸ್ವಾಮಿ(HDK) ಗಳಸ್ಯ ಕಂಠಸ್ಯ ಇದ್ದಾರೆ. ಅವರಿಬ್ಬರೂ ಚೆನ್ನಾಗಿಯೇ ಇದ್ದಾರೆ. ಜಮೀರ್ ಬಾಯಲ್ಲಿ ಕುಮಾರಸ್ವಾಮಿಯೇ ಕರಿಯ ಅಂತ ಹೇಳಿಸಿರಬಹುದು ಎನ್ನುವ ಮಾತುಗಳನ್ನು ಹೇಳಿದ್ದಾರೆ. ಒಕ್ಕಲಿಗ ಪ್ರಾಬಲ್ಯವಿರುವ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದರೆ ಡಿಸಿಎಂ ಡಿ.ಕೆ ಶಿವಕುಮಾರ ಪ್ರಾಬಲ್ಯ ಹೆಚ್ಚಾಗುವ ಸಾಧ್ಯತೆಯಿದೆ. ಹೀಗಾಗಿ ಸಿಎಂ ಆಪ್ತವಾಗಿರುವ ಜಮೀರ್ ಅವರಿಂದಲೂ ಉದ್ದೇಶಪೂರ್ವಕವಾಗಿ ಕರಿಯ ಅಂತ ಹೇಳಿಸರಬಹುದು ಎಂದು ಹೇಳುತ್ತಿದ್ದಾರೆ. ಅದೇನೆ ಇದ್ದರೂ ನವೆಂಬರ್ 23ರಂದು ತಿಳಿಯಲಿದೆ.