ಪ್ರಜಾಸ್ತ್ರ ಸುದ್ದಿ
ಪಾಟ್ನಾ(Patna): ಬಿಹಾರದಲ್ಲಿ ಸಾಕಷ್ಟು ಮಳೆಯಾಗುತ್ತಿರುವ ಹಿನ್ನಲೆಯಲ್ಲಿ ಗಂಗಾ ನದಿಯ ಹಲವು ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗು ಸಾಧ್ಯತೆಯಿದೆ. ಪಾಟ್ನಾ ಹತ್ತಿರದ ಗಾಂಧಿ ಘಾಟ್ ನಲ್ಲಿ ಗಂಗಾ ನದಿಯ ಪ್ರಮಾಣ 10 ಸೆ.ಮೀ ಏರಿಕೆಯಾಗಿದೆ. ಈ ಮೂಲಕ 50.53 ಸೆ.ಮೀಗೆ ಏರಿಕೆಯಾಗಿದೆ.
ಶನಿವಾರ ಗರಿಷ್ಠ ಪ್ರವಾಹ ಮಟ್ಟಕ್ಕಿಂತ 1 ಸೆ.ಮೀ ಎತ್ತರದಲ್ಲಿ ನದಿ ಹರಿಯುತ್ತಿದೆಯಂತೆ. ಭಾನುವಾರ ಇನ್ನು ಹೆಚ್ಚಾಗುವ ಸಾಧ್ಯತೆಯಿದ್ದು, ಪ್ರವಾಹ ಸಂಭವಿಸಬಹುದು ಎನ್ನಲಾಗುತ್ತಿದೆ. ನೆರೆಯ ನೇಪಾಳದಲ್ಲಿ ಅಪಾರ ಪ್ರಮಾಣದಲ್ಲಿ ಮಳೆಯಾಗುತ್ತಿದೆ. ಗಂಗಾ, ಬುರ್ಹಿ, ಬಾಗ್ಮತಿ, ಕೋಸಿ, ಗಂಡಕ್, ಗಾಘ್ರಾ ಸೇರಿ ಹಲವು ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಕೆಲವು ಪ್ರವಾಹ ಸ್ಥಿತಿ ಉಂಟಾಗಿದೆ. ಸ್ಥಳೀಯರು ಎಚ್ಚರಿಕೆಯಿಂದ ಇರಲು ಅಧಿಕಾರಿಗಳು ತಿಳಿಸಿದ್ದಾರೆ.



