LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಸಿಂದಗಿ: ಕಿಡಿಗೇಡಿಗಳ ಕೃತ್ಯಕ್ಕೆ ಹಾಳಾದ ದ್ರಾಕ್ಷಿ, ಶಾಸಕರು ಭೇಟಿ

ಪ್ರಜಾಸ್ತ್ರ ಸುದ್ದಿ

ಸಿಂದಗಿ(Sindagi): ಯಾರೋ ಕಿಡಿಗೇಡಿಗಳು ನೀರಿನ ಟ್ಯಾಂಕರ್ ಗೆ ವಿಷಪೂರಿತ ಔಷಧವನ್ನು ಮಿಶ್ರಣ ಮಾಡಿದ ಪರಿಣಾಮ ತಾಲೂಕಿನ ಸೋಂಪುರ ಗ್ರಾಮದ ಮಹಾದೇವಿ ಚಳ್ಳಗಿ ಎಂಬುವರ 5 ಎಕರೆ ಹೊಲದಲ್ಲಿ ಬೆಳೆದ ದಾಕ್ಷಿ ಹಾಳಾಗಿದೆ. ಈ ವಿಚಾರ ತಿಳಿದ ಶಾಸಕ ಅಶೋಕ ಮನಗೂಳಿ ಅವರು ಗುರುವಾರ ಅಧಿಕಾರಿಗಳೊಂದಿಗೆ ಹೊಲಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ವೇಳೆ ಮಾತನಾಡಿದ ಶಾಸಕರು ಸರ್ಕಾರದಿಂದ ಏನು ಸೂಕ್ತ ಪರಿಹಾರ ಸಿಗುತ್ತೋ ಅದನ್ನು ಕೊಡಿಸುವ ಕೆಲಸ ಮಾಡುತ್ತೇನೆ. ಪರಿಹಾರ ಒದಗಿಸುವ ನಿಟ್ಟಿನಲ್ಲಿ ಏನೆಲ್ಲ ಅವಕಾಶಗಳಿವೆ ಅನ್ನೋದರ ಕುರಿತು ನನಗೆ ಮಾಹಿತಿ ನೀಡಿ ನಾನು ಸರ್ಕಾರದ ಮಟ್ಟದಲ್ಲಿ ಮಾತನಾಡುತ್ತೇನೆ ಎಂದು ಅಧಿಕಾರಿಗಳಿಗೆ ಹೇಳಿದರು.

ಈ ವೇಳೆ ತಹಶೀಲ್ದಾರ್ ಕರೆಪ್ಪ ಬೆಳ್ಳಿ, ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಆಕಾಶ ಉಟಗಿ, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಪ್ರಕಾಶ ಸಾಣೆ, ಸಿಪಿಐ ಸುನೀಲ ಮೂಲಿಮನಿ ಸೇರಿದಂತೆ ಇತರೆ ಅಧಿಕಾರಿಗಳಿದ್ದರು.

Advertisement

Author
Editor: Nagesh Talawar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST