ಪ್ರಜಾಸ್ತ್ರ ಸುದ್ದಿ
ಸಿಂದಗಿ(Sindagi): ನಗರದ ವಾರ್ಡ್ ನಂಬರ್ 22 ಹಾಗೂ 23ರ ವ್ಯಾಪ್ತಿಯಲ್ಲಿ ಬರುವ ಕಲ್ಯಾಣನಗರದಲ್ಲಿನ ಸರ್ಕಾರಿ ಶಾಲೆಗಳ ಅವ್ಯವಸ್ಥೆ ವಿರುದ್ಧ ಕೆಆರ್ ಎಸ್ ಪಕ್ಷದಿಂದ ದೀಡನಮಸ್ಕಾರ ಹಾಕುವ ಮೂಲಕ ವಿನೂತನ ಪ್ರತಿಭಟನೆ ನಡೆಸಲಾಯಿತು. ನಗರದ ಟಿಪ್ಪು ಸುಲ್ತಾನ್ ಸರ್ಕಲ್ ನಿಂದ ಪ್ರಾರಂಭವಾದ ಪ್ರತಿಭಟನೆ, ಅಂಬೇಡ್ಕರ್ ಸರ್ಕಲ್ ಮಾರ್ಗವಾಗಿ ಸಾಗಿ ಕ್ಷೇತ್ರಶಿಕ್ಷಣಾಧಿಕಾರಿಗಳ ಕಚೇರಿ ತಲುಪಿತು.
ಕೆಆರ್ ಎಸ್ ಪಕ್ಷದ ತಾಲೂಕಾಧ್ಯಕ್ಷ ನಬೀರ್ ಹುಣಸ್ಯಾಳ ಸೇರಿದಂತೆ ಇತರರು ದೀಡನಮಸ್ಕಾರ ಹಾಕುವ ಮೂಲಕ ವಾರ್ಡ್ ನಂಬರ್ 22, 23ರ ವ್ಯಾಪ್ತಿಯಲ್ಲಿನ ಸರ್ಕಾರಿ ಶಾಲೆಯಲ್ಲಿ ಸೂಕ್ತ ಶೌಚಾಲಯ ವ್ಯವಸ್ಥೆ ಇಲ್ಲ. ಕಾಂಪೌಂಡ್, ಗೇಟ್ ವ್ಯವಸ್ಥೆ ಇಲ್ಲ. ಇದನ್ನು ಸರಿಪಡಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಲಾಯಿತು. 10 ದಿನದೊಳಗೆ ಸಮಸ್ಯೆ ಬಗೆಹರಿಸುವುದಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹೇಳಿದ್ದಾರೆ ಎಂದು ತಿಳಿಸಲಾಗಿದೆ. ಈ ವೇಳೆ ಕೆಆರ್ ಎಸ್ ಪಕ್ಷದ ಹಿರಿಯ ಮುಖಂಡ ಶಿವಾನಂದ ಯಡಳ್ಳಿ, ಸದಸ್ಯರಾದ ಜಗದೀಶ ಕಲಬುರ್ಗಿ ಸೇರಿದಂತೆ ಇತರರು ಭಾಗವಹಿಸಿದ್ದರು.



