ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಓಯೋ ರೂಮ್ ಫೇಮಸ್ ಆಗಿರುವುದು ಕಪಲ್ಸ್ ಗೆ ರೂಮ್ ನೀಡುವ ಸಲುವಾಗಿ. ಅದರಲ್ಲೂ ಅವಿವಾಹಿತರಿಗಾಗಿ ಇದು ಇರುವುದು. ಪ್ರೇಮಿಗಳು ಖಾಸಗಿಯಾಗಿ ಕ್ಷಣಗಳನ್ನು ಕಳೆಯಲು ಓಯೋ ರೂಮ್ ಬುಕ್ ಮಾಡುತ್ತಿದ್ದರು. ಇನ್ಮುಂದೆ ಹೀಗೆ ಆಗಲ್ಲ. ಅವಿವಾಹಿತರಿಗೆ ರೂಮ್ ನೀಡದಿರಲು ನಿರ್ಧಾರಕ್ಕೆ ಬಂದಿದೆ. ಈ ಮೂಲಕ ಹೊಸ ಚೆಕ್ ಇನ್ ಮಾರ್ಗಸೂಚಿಗಳನ್ನು ತರುತ್ತಿದೆ. ಗುಜರಾತಿನ ಮಿರತ್ ಮೂಲಕ ಇದನ್ನು ಜಾರಿಗೆ ತರಲು ಸಜ್ಜಾಗಿದೆ.
ಲಾಡ್ಜ್ ಬುಕ್ಕಿಂಗ್ ಕಂಪನಿಗಳಲ್ಲಿ ಓಯೋ ಒಂದು. ಆದರೆ, ಇಲ್ಲಿ ಬುಕ್ ಆಗುವುದು ಜೋಡಿಗಳು. ಇದರ ಬಗ್ಗೆ ನೆಗೆಟಿವ್ ಅಭಿಪ್ರಾಯ ಇದ್ದರೂ ಅತಿ ವೇಗವಾಗಿ ಪ್ರಸಿದ್ಧಿಗೆ ಬಂತು. ಯಾಕಂದರೆ ಜೋಡಿಗಳು ಏಕಾಂತವಾಗಿ ಸಮಯ ಕಳೆಯಲು ಇಲ್ಲಿ ಅವಕಾಶ ನೀಡಲಾಯಿತು. ಇದರಿಂದಾಗಿ ಇಲ್ಲಿ ಅಕ್ರಮ ಚಟುವಟಿಕೆಗಳು ನಡೆಯುವುದು ಕಾಮನ್ ಮಾತು ಚಾಲ್ತಿಗೆ ಬಂತು. ತನ್ನ ಪಾಲುದಾರಿಕೆ ಹೋಟೆಲ್ ಗಳ ಸಲುವಾಗಿ ಈ ನಿರ್ಧಾರಕ್ಕೆ ಬರಲಾಗಿದೆ. ಸ್ಥಳೀಯ ಪ್ರದೇಶದ ಪರಿಸ್ಥಿತಿ ನೋಡಿಕೊಂಡು ಮಾರ್ಗಸೂಚಿಗಳನ್ನು ಬದಲಾವಣೆ ಮಾಡುತ್ತಿದೆ. ಚೆಕ್ ಇನ್ ಸಂದರ್ಭದಲ್ಲಿ ಐಡಿ ಪ್ರೂಫ್ ನೀಡುವುದು ಕಡ್ಡಾಯ ಮಾಡಿದೆ.