ಪ್ರಜಾಸ್ತ್ರ ಸುದ್ದಿ
ನವದೆಹಲಿ(New Delhi): ಆರ್ ಜೆ ಹಾಗೂ ಸೋಷಿಯಲ್ ಮೀಡಿಯಾ ಇನ್ ಫ್ಲುಯನ್ಸರ್ ಆಗಿದ್ದ ಜಮ್ಮು ಮೂಲದ ಸಿಮ್ರಾನ್ ಸಿಂಗ್ ಎನ್ನುವ 25 ವರ್ಷದ ಯುವತಿಯ ಮೃತದೇಹ ಅಪಾರ್ಟ್ ಮೆಂಟ್ ನಲ್ಲಿ ಪತ್ತೆಯಾಗಿದೆ. ದೆಹಲಿ ಹತ್ತಿರದ ಗುರುಗ್ರಾಮದ ಸೆಕ್ಟರ್ 47ರ ಬಳಿಯ ಆಕೆಯ ರೂಮಿನಲ್ಲಿ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ಬುಧವಾರ ರಾತ್ರಿಯೇ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಹೇಳಲಾಗುತ್ತಿದೆ.
ರೂಮಿನಲ್ಲಿ ಯಾವುದೇ ಡೆತ್ ನೋಟ್ ಪತ್ತೆಯಾಗಿಲ್ಲ. ರೂಮ್ ಬಾಗಿಲು ಒಳಗಿನಿಂದ ಲಾಕ್ ಆಗಿದ್ದರಿಂದ ಆತ್ಮಹತ್ಯೆ ಮಾಡಿಕೊಂಡರಬಹುದು ಎಂದು ಶಂಕಿಸಲಾಗಿದೆ. ಗೆಳೆಯನೊಂದಿಗೆ ಸಿಮ್ರಾನ್ ಸಿಂಗ್ ಇಲ್ಲಿ ವಾಸವಾಗಿದ್ದಳು. ಈ ಬಗ್ಗೆ ಆತನಿಗೆ ಹಾಗೂ ಆಕೆ ಕುಟುಂಬಸ್ಥರಿಗೆ ಮಾಹಿತಿ ನೀಡಲಾಗಿದೆ. ಇನ್ ಸ್ಟಾಗ್ರಾಂನಲ್ಲಿ 6 ಲಕ್ಷಕ್ಕೂ ಅಧಿಕ ಫಾಲೋವರ್ಸ್ ಹೊಂದಿದ್ದಳು. ತನ್ನ ಸ್ನೇಹ ಬಳಗದಲ್ಲಿ ಜಮ್ಮು ಕಿ ದಡಕನ್(ಜಮ್ಮುವಿನ ಹೃದಯ ಬಡಿತ) ಎಂದು ಕರೆಸಿಕೊಳ್ಳುತ್ತಿದ್ದಳು. ಜಮ್ಮು ಮತ್ತು ಕಾಶ್ಮೀರ್ ರಾಷ್ಟ್ರೀಯ ಕಾನ್ ಫರೆನ್ಸ್ ಅಧ್ಯಕ್ಷ ಫಾರೂಕ್ ಅಬ್ದುಲ್ ಹಾಗೂ ಮುಖ್ಯಮಂತ್ರಿ ಉಮರ್ ಅಬ್ದುಲ್ ಸಂತಾಪ ಸೂಚಿಸಿದ್ದಾರೆ.