Ad imageAd image

ಯಾವ ಅನಾರೋಗ್ಯದ ಸಮಸ್ಯೆ ಇರುವವರು ದಾಳಿಂಬೆ ತಿನ್ನಬಾರದು?

Nagesh Talawar
ಯಾವ ಅನಾರೋಗ್ಯದ ಸಮಸ್ಯೆ ಇರುವವರು ದಾಳಿಂಬೆ ತಿನ್ನಬಾರದು?
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಇವತ್ತಿನ ಜೀವನ ಶೈಲಿನಲ್ಲಿ ಪ್ರತಿಯೊಬ್ಬರು ಒಂದಲ್ಲ ಒಂದು ಅನಾರೋಗ್ಯದಿಂದ ಬಳಲುವಂತಾಗಿದೆ. ಬಿಪಿ, ಶುಗರ್ ಸಹಜ ಎನ್ನುವಂತಾಗಿದೆ. ಜಗತ್ತು ವೇಗವಾಗಿ ಬೆಳೆದಂತೆ ಬದುಕಿನ ರೀತಿ ರಿವಾಜುಗಳು ಸಹ ಬದಲಾಗುತ್ತಿವೆ. ಹೀಗಾಗಿ ಸಣ್ಣವರಿಂದ ಹಿಡಿದು ದೊಡ್ಡವರ ತನಕ ಒಂದಲ್ಲ ಒಂದು ಆರೋಗ್ಯ ಸಮಸ್ಯೆ ಕಾಡುತ್ತಿವೆ. ಹೀಗಾಗಿ ಕೆಲವೊಂದಿಷ್ಟು ಆಹಾರಗಳನ್ನು ತಿನ್ನದ ಸ್ಥಿತಿ ಬಂದಿದೆ. ದಾಳಿಂಬೆ(Pomegranate) ಯಾರಿಗೆ ಇಷ್ಟವಿಲ್ಲ ಹೇಳಿ. ಪ್ರತಿಯೊಬ್ಬರು ಇದನ್ನು ತಿನ್ನಲು ಬಯಸುತ್ತಾರೆ. ಇದರಲ್ಲಿ ಕಬ್ಬಿಣದ ಅಂಶ, ವಿಟಮಿನ್ ಸಿ ಹಾಗೂ ಕೆ ಸೇರಿ ಇತರೆ ಖನಿಜಗಳು ಹೇರಳವಾಗಿವೆ.

ಇಂತಹ ದಾಳಿಂಬೆಯನ್ನು ಕೆಲವರು ತಿನ್ನಬಾರದು ಎಂದು ಹೇಳಲಾಗುತ್ತೆ. ರಕ್ತದೊತ್ತಡ ಇರುವವರು ದಾಳಿಂಬೆ ತಿಂದರೆ ಇತರೆ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಮಧುಮೇಹ, ಹೊಟ್ಟೆ ನೋವು, ಗ್ಯಾಸ್ ಸಮಸ್ಯೆ, ಮೂತ್ರಪಿಂಡದ ಸಮಸ್ಯೆ, ಚರ್ಮದ ಅಲರ್ಜಿ, ಅಜೀರ್ಣ ಸಮಸ್ಯೆಯಿಂದ ಬಳಲುತ್ತಿರುವವರು ಸಹ ದಾಳಿಂಬೆ ತಿನ್ನಬಾರದಂತೆ. ಇನ್ನು ಥೈರಾಯ್ಡ್ ಸಮಸ್ಯೆಯಿದ್ದವರು ದಾಳಿಂಬೆ ತಿಂದರೆ ಹಾರ್ಮೋನ್ ಗಳ ಅಸಮತೋಲನ ಕಾಣಿಸಿಕೊಳ್ಳುತ್ತದೆಯಂತೆ. ಈ ರೀತಿಯ ಸಮಸ್ಯೆಯಿಂದ ಬಳಲುತ್ತಿರುವವರು ದಾಳಿಂಬೆಯಿಂದ ದೂರ ಇರಬೇಕು ಎಂದು ಹೇಳಲಾಗುತ್ತಿದೆ.

(ಇದು ಕೇವಲ ಮಾಹಿತಿ ನೀಡುವ ವಿಚಾರದಿಂದಾಗಿ ಹೇಳಲಾಗಿದೆ. ಈ ರೀತಿಯ ಆರೋಗ್ಯ ಸಮಸ್ಯೆ ಹಾಗೂ ಇತರೆ ಕಾಯಿಲೆಗಳಿಂದ ಬಳಲುತ್ತಿರುವವರು ತಜ್ಞ ವೈದ್ಯರನ್ನು ಸಂಪರ್ಕಿಸಿ ಅವರ ಸಲಹೆ, ಸೂಚನೆ ಮೇರೆಗೆ ದಾಳಿಂಬೆ ಸೇವನೆ ಬಗ್ಗೆ ಹೆಚ್ಚಿನದನ್ನು ತಿಳಿದುಕೊಳ್ಳಬಹುದು.)

WhatsApp Group Join Now
Telegram Group Join Now
Share This Article