ಪ್ರಜಾಸ್ತ್ರ ಸುದ್ದಿ
ಚಿತ್ರರಂಗದಲ್ಲಿ ಕಾಸ್ಟಿಂಗ್ ಕೌಚ್(Casting Couch) ಬಗ್ಗೆ ಚರ್ಚೆಯಾಗುತ್ತಲೇ ಇದೆ. ಕಲಾವಿದೆಯರಿಗೆ ಲೈಂಗಿಕ ಕಿರುಕುಳ, ದೌರ್ಜನ್ಯ, ಮಾನಸಿಕ ಹಿಂಸೆ ಸೇರಿದಂತೆ ಅವರ ಘನತೆಗೆ ಧಕ್ಕೆ ತರುವ ಕೆಲಸಗಳು ನಡೆಯುತ್ತಲೇ ಇವೆ ಎನ್ನುವ ಕೂಗು ಎದ್ದು ಬಹಳ ದಿನಗಳಾಯುಯ್ತು. ಭಾರತೀಯ ಚಿತ್ರರಂಗದ ವಿವಿಧ ಭಾಷೆಗಳ ಹಲವು ನಟಿಯರು ತಮಗಾದ ಕೆಟ್ಟ ಅನುಭವ ಹಂಚಿಕೊಳ್ಳುತ್ತಿದ್ದಾರೆ. ಕೆಲವರು ಕಾನೂನು ಹೋರಾಟ ಮಾಡುತ್ತಿದ್ದಾರೆ. ಕನ್ನಡದಲ್ಲಿಯೂ ಕಾಸ್ಟಿಂಗ್ ಕೌಚ್ ಸದ್ದು ಮಾಡುತ್ತಲೇ ಇದೆ. ಇದೀಗ ಕಿರುತರೆ ಖ್ಯಾತ ನಟಿ ನಮ್ರತಾ ತಮಗಾದ ಕೆಟ್ಟ ಅನುಭವವನ್ನು ಖಾಸಗಿ ಸುದ್ದಿ ವಾಹಿನಿಯೊಂದರಲ್ಲಿ ಹೇಳಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಹಿರೋಯಿನ್ ಗಳ ಫೋಟೋಗಳನ್ನು ಸಂಗ್ರಹಿಸುತ್ತಾರೆ. ಒಬ್ಬೊಬ್ಬರದು ಒಂದೊಂದು ಪ್ರೊಫೈಲ್ ಕ್ರಿಯೇಟ್ ಮಾಡುತ್ತಾರೆ. ಇದನ್ನು ಕೆಲವರಿಗೆ ತೋರಿಸಿ ಇವರು ನಿಮ್ಮ ಬಳಿ ಬರುತ್ತಾರೆ ಎಂದು ನಮಗೆ ಗೊತ್ತಿಲ್ಲದೆ ನಮಗೊಂದು ರೇಟ್ ಫಿಕ್ಸ್ ಮಾಡ್ತಾರೆ. ನಾನು ಬಾಲನಟಿಯಾಗಿ ಚಿತ್ರರಂಗಕ್ಕೆ ಬಂದಿದ್ದೇನೆ. ಒಂದು ದಿನ ಮಹಿಳೆಯೊಬ್ಬಳು ಫೋನ್ ಮಾಡಿ ನಾಳೆ ಸಂಜೆ ಈವೆಂಟ್ ಗೆ ನೀವು ಹೋಗುತ್ತಿದ್ದೀರ ಎಂದು ಕೇಳಿದಳು. ನನಗೇನು ಅರ್ಥವಾಗಿಲ್ಲ ಎಂದೆ. ಕಮಿಟ್ ಮೆಂಟ್ ಗೆ ಈವೆಂಟ್ ಎಂದು ಹೇಳುತ್ತಾರೆ ಎಂದಳು. ನಾನು ಫೋನ್ ಕಟ್ ಮಾಡಿದೆ. ಆ ಮಹಿಳೆ ಬಗ್ಗೆ ಮಾಹಿತಿ ಕಲೆ ಹಾಕುತ್ತಾ ಹೋದೆ. ನಮಗೆ ಗೊತ್ತಿಲ್ಲದೆ ರೇಟ್ ಫಿಕ್ಸ್ ಮಾಡ್ತಾರೆ. ಆಮೇಲೆ ಫೋನ್ ಸ್ವಿಚ್ ಆಫ್ ಮಾಡಿಕೊಂಡು ಯಾರ ಕೈಗೂ ಸಿಗದೆ ಇರುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಈ ಕುರಿತು ಕಾನೂನು ಹೋರಾಟ ಮಾಡುವುದಾಗಿಯೂ ಹೇಳಿದ್ದಾರೆ.