ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ನಟ ವಿನೋದ್ ಪ್ರಭಾಕರ್ ನಟನೆಯ ಮಾದೇವ ಸಿನಿಮಾ ಯಶಸ್ವಿಯಾಗಿ ಮುನ್ನುಗ್ಗುತ್ತಿದೆ. ಎರಡು ವಾರಗಳ ಹಿಂದೆ ಬಿಡುಗಡೆಯಾದ ಸಿನಿಮಾ ನೋಡುಗರನ್ನು ಸೆಳೆಯುತ್ತಿದೆ. ನವೀನ್ ರೆಡ್ಡಿ.ಬಿ ನಿರ್ದೇಶನದ ಮಾದೇವ ಚಿತ್ರದ ಕಥೆ ಗಟ್ಟಿಯಾಗಿದ್ದು, ನಟ ವಿನೋದ್ ಪ್ರಭಾಕರ್ ತಮ್ಮ ನಟನೆಯ ಮೂಲಕ ಸೈ ಎನಿಸಿಕೊಂಡಿದ್ದಾರೆ. ನಟಿ ಸೋನಲ್ ಮೊಂತೆರೋ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ.
ನಟ ಶ್ರೀನಗರ ಕಿಟ್ಟಿ, ನಟಿಯರಾದ ಶ್ರುತಿ, ಮಾಲಾಶ್ರೀ, ಪೋಷಕ ನಟ ಅಚ್ಯುತ್ ಕುಮಾರ್ ಅವರಂತಹ ದೊಡ್ಡ ತಾರಾಬಳಗವಿದೆ. ಮಾದೇವ ಚಿತ್ರದಲ್ಲಿ ನಟ ವಿನೋದ್ ಪ್ರಭಾಕರ್ ತಮ್ಮ ನಟನೆಯ ಸಾಮರ್ಥ್ಯವನ್ನು ತೋರಿಸಿದ್ದಾರೆ. ಟೈಗರ್ ಪ್ರಭಾಕರ್ ಮಗನಾಗಿದ್ದರೂ ಕಳೆದ 20 ವರ್ಷಗಳಿಂದ ಗಾಂಧಿ ನಗರದಲ್ಲಿ ಕಷ್ಟಪಡುತ್ತಿದ್ದಾರೆ. ದೊಡ್ಡ ಮಟ್ಟದ ಸಕ್ಸಸ್ ಸಿಗಬೇಕೆಂದು ಪ್ರಯತ್ನಿಸುತ್ತಿದ್ದರು, ಅದಕ್ಕೆ ಇದೀಗ ಪ್ರತಿಫಲ ಸಿಕ್ಕಿದೆ. ಜೂನ್ 6ರಂದು ಬಿಡುಗಡೆಯಾದ ಸಿನಿಮಾ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದ್ದು, ಕೋಟಿ ಕೋಟಿ ಕಲೆಕ್ಷನ್ ಮಾಡುತ್ತಿದೆ.