ಪ್ರಜಾಸ್ತ್ರ ಸುದ್ದಿ
ಕೋಲ್ಕತ್ತಾ(Kolkta): ಭಾನುವಾರ ರಾತ್ರಿ ನಡೆದ ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ರಾಜಸ್ತಾನ್ ರಾಯಲ್ಸ್ ಪಡೆ ಸೋಲು ಅನುಭವಿಸಿದೆ. ಮೊದಲು ಬ್ಯಾಟ್ ಮಾಡಿದ ರಾಜಸ್ತಾನ್ ತಂಡ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 155 ರನ್ ಮಾತ್ರ ಕಲೆ ಹಾಕಿತು. ಇದನ್ನು ತಲುಪಲು ಕೆಕೆಆರ್ ಸಹ 19.4 ಓವರ್ ಗಳನ್ನು ತೆಗೆದುಕೊಂಡಿತು. ಅಲ್ಲದೆ 6 ವಿಕೆಟ್ ಕಳೆದುಕೊಂಡು 4 ವಿಕೆಟ್ ಅಂತರದಿಂದ ಜಯ ಸಾಧಿಸಿತು.
ಇಲ್ಲಿ ಆರ್ ಆರ್ ಟೀಂ ಸೋಲಿನ ನಡುವೆ ದಾಖಲೆಯೊಂದು ಮಾಡಿದೆ. ರಾಜಸ್ಥಾನದ ಟೀಂ ಬೌಲರ್ ಜೋಪ್ರಾ ಆರ್ಚರ್ ಮೊದಲ ಎಸೆತದಲ್ಲಿ ವಿಕೆಟ್ ಪಡೆದರು. ಈ ಮೂಲಕ ಸತತ ಮೂರು ಪಂದ್ಯಗಳಲ್ಲಿ ಮೊದಲ ಓವರ್ ನ ಮೊದಲ ಎಸೆತದಲ್ಲಿ ವಿಕೆಟ್ ಪಡೆದ ಏಕೈಕ ಬೌಲರ್ ಎನಿಸಿಕೊಂಡರು. ಆರ್ ಸಿಬಿ ತಂಡದ ಫಿಲ್ ಸಾಲ್ಟ್, ಎಸ್ಆರ್ ಎಚ್ ತಂಡದ ಅಭಿಷೇಕ್ ಶರ್ಮಾ ಅವರನ್ನು ಹಿಂದಿನ ಎರಡು ಪಂದ್ಯಗಳಲ್ಲಿ ವಿಕೆಟ್ ಪಡೆದಿದ್ದರು. ಭಾನುವಾರ ಕೆಕೆಆರ್ ಟೀಂ ಟಿಮ್ ಸೈಫರ್ಟ್ ವಿಕೆಟ್ ಪಡೆದು ಈ ಸಾಧನೆ ಮಾಡಿದರು.
ಐಪಿಎಲ್ ಟೂರ್ನಿಯೊಂದರಲ್ಲಿ ಮೊದಲ ಎಸೆತದಲ್ಲಿಯೇ 5 ಬಾರಿ ವಿಕೆಟ್ ಪಡೆದ ಸಾಧನೆಯನ್ನು ಲಖನೌ ಸೂಪರ್ ಜಯಂಟ್ಸ್ ತಂಡದ ಮೊಹಮ್ಮದ್ ಶೆಮಿ ಮಾಡಿದ್ದಾರೆ. ಇವರ ಜೊತೆಗೆ ಈಗ ಜೋಫ್ರಾ ಆರ್ಚರ್ ಕೂಡಿಕೊಂಡರು.




