ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಕನ್ನಡ ಬಿಗ್ ಬಾಸ್ 11ರ ಸೀಸನ್ ನಲ್ಲಿ ವಕೀಲ ಜಗದೀಶ್ ಹಾಗೂ ರಂಜಿತ್ ಅವರ ನಡುವೆ ದೊಡ್ಡ ಜಗಳ ನಡೆದಿದೆ. ಇದರ ಪರಿಣಾಮ ಇವರಿಬ್ಬರನ್ನು ಹೊರಗೆ ಹಾಕಲಾಗಿದೆ ಎಂದು ತಿಳಿದು ಬಂದಿದೆ. ಸ್ಪರ್ಧಿ ಮಾನಸ ವಿಚಾರವಾಗಿ ಜಗಳ ನಡೆದಿದೆ ಎಂದು ಹೇಳಲಾಗುತ್ತಿದೆ. ಬಿಗ್ ಬಾಸ್ ವಿರುದ್ಧವೇ ಅವಹೇಳನಕಾರಿಯಾಗಿ ಮಾತನಾಡಿರುವುದು ಹಾಗೂ ಹೊಡೆದಾಡಿಕೊಂಡಿರುವುದಕ್ಕೆ ಹೊರಗೆ ಹಾಕಲಾಗಿದೆ ಎಂದು ಹೇಳಲಾಗುತ್ತಿದೆ.
ಈ ಹಿಂದೆ ನಟ ಹುಚ್ಚ ವೆಂಕಟ್ ಅವರನ್ನು ಬಿಗ್ ಬಾಸ್ ಶೋನಿಂದ ಹೊರಗೆ ಹಾಕಲಾಗಿತ್ತು. ಅಂದು ಸಹ ಹುಚ್ಚ ವೆಂಕಟ್ ಗಲಾಟೆ ಮಾಡಿಕೊಂಡಿದ್ದರು. ಗಾಯಕ ರವಿ ಮೇಲೆ ಹಲ್ಲೆ ಮಾಡಿದ್ದರು. ಇದರಿಂದಾಗಿ ಅವರನ್ನು ಹೊರಗೆ ಹಾಕಲಾಗಿತ್ತು. ಇದೀಗ ವಕೀಲ ಜಗದೀಶ್ ಹಾಗೂ ರಂಜಿತ್ ಅವರ ನಡುವೆ ದೊಡ್ಡ ಮಟ್ಟದಲ್ಲಿ ಜಗಳವಾಗಿದೆಯಂತೆ. ಹೀಗಾಗಿ ಅವರನ್ನು ಹೊರಗೆ ಹಾಕಲಾಗಿದೆ ಎಂದು ಹೇಳಲಾಗುತ್ತಿದೆ.
ವಕೀಲ ಜಗದೀಶ್ ವರ್ಸಸ್ ಇಡೀ ಮನೆ ಸದಸ್ಯರು ಎನ್ನುವಂತಾಗಿತ್ತು. ಎಲ್ಲರನ್ನೂ ಜಗಳವಾಡುತ್ತಲೇ ಬರುತ್ತಿದ್ದರು. ಉಗ್ರಂ ಮಂಜು, ಚೈತ್ರಾ ಕುಂದಾಪುರ ಸೇರಿದಂತೆ ಎಲ್ಲರೊಂದಿಗೆ ದೊಡ್ಡ ಮಟ್ಟದಲ್ಲೇ ಜಗಳವಾಡಿದ್ದಾರೆ. ಹಂಸ ವಿಚಾರದಲ್ಲಿಯೂ ಇದು ಆಗಿದೆ. ಶೋ ನಡೆಸುವವರ ವಿರುದ್ಧವೇ ಜಗದೀಶ್ ಮಾತನಾಡಿದ್ದರು. ಬೆದರಿಕೆ ಹಾಕಿದ್ದರು. ಮರುದಿನ ಕ್ಷಮೆ ಕೇಳಿದ್ದರು. ಈಗ ಪತ್ರಕರ್ತ ರಂಜಿತ್ ಹಾಗೂ ವಕೀಲ ಜಗದೀಶ್ ನಡುವೆ ಕೈ ಕೈ ಮೀಲಾಯಿಸುವ ಹಂತಕ್ಕೆ ಹೋಗಿ ಅವರನ್ನು ಹೊರಗೆ ಹಾಕಲಾಗಿದೆ ಎನ್ನುವ ವಿಚಾರ ಬೆಳಕಿಗೆ ಬಂದಿದೆ.