ಪ್ರಜಾಸ್ತ್ರ ಸುದ್ದಿ
ಬಳ್ಳಾರಿ(Ballari): ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ಬಳ್ಳಾರಿ ಜೈಲಿಗೆ ಸ್ಥಳಾಂತರಗೊಂಡಿರುವ ನಟ ದರ್ಶನ್(Darshan) ಶೌಚಾಲಯಕ್ಕೆ ಸರ್ಜಿಕಲ್ ಚೇರ್ ಕೇಳಿದ್ದಾರೆ ಎಂದು ಉತ್ತರ ವಲಯ ಡಿಐಜಿ ಟಿ.ಪಿ ಶೇಷ ಅವರು ಹೇಳಿದ್ದಾರೆ. ಒಂದು ವೇಳೆ ಅವರು ಟಿವಿ ಕೇಳಿದರೆ ಕೊಡಲಾಗುವುದು. ಇತರೆ ಕೈದಿಗಳಿಗೂ ಈ ವ್ಯವಸ್ಥೆ ಇದೆ ಎಂದರು.
ಬೆನ್ನಲುಬು ಸಮಸ್ಯೆ ಇರುವ ಕಾರಣಕ್ಕೆ ಶೌಚಾಲಯಕ್ಕೆ ಕಷ್ಟವಾಗುತ್ತದೆ. ಇಲ್ಲಿ ಇಂಡಿಯನ್ ಟಾಯ್ಲೆಟ್ ಇದೆ. ಹೀಗಾಗಿ ವೆಸ್ಟ್ರನ್ ಕಮೋಡಾ ಅಥವ ಸರ್ಜಿಕಲ್ ಚೇರ್ ಕೊಡಿ ಎಂದು ಕೇಳಿದ್ದಾರೆ. ಇಲಾಖೆ ಸೂಚನೆ ಮೇರೆಗೆ ಶನಿವಾರ ಜೈಲಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಯಿತು. ಕುಟುಂಬಸ್ಥರು, ವಕೀಲರು ಬಿಟ್ಟು ಬೇರೆ ಯಾರಿಗೂ ಭೇಟಿಗೆ ಅವಕಾಶ ನೀಡುವುದಿಲ್ಲವೆಂದು ಹೇಳಿದರು.