ಪ್ರಜಾಸ್ತ್ರ ಸುದ್ದಿ
ನವದೆಹಲಿ(New Delhi): ದೆಹಲಿ ಆಪ್(AAP) ಸಚಿವ ಕೈಲಾಶ್ ಗೆಹ್ಲೋಟ್ ರಾಜೀನಾಮೆ ಸಲ್ಲಿಸಿದ್ದಾರೆ. ಸಚಿವ ಸ್ಥಾನದ ಜೊತೆಗೆ ಪಕ್ಷಕ್ಕೂ ರಾಜೀನಾಮೆ ಸಲ್ಲಿಸಿದ್ದಾರೆ. ಗೆಹ್ಲೋಟ್ ಗೃಹ ಖಾತೆ(Home Minister) ಜೊತೆಗೆ ಸಾರಿಗೆ, ಐಟಿ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹ ನಿರ್ವಹಿಸುತ್ತಿದ್ದರು. ರಾಜೀನಾಮೆ ಮೂಲಕ ಆಪ್ ಸರ್ಕಾರಕ್ಕೆ ಶಾಕ್ ನೀಡಿದ್ದಾರೆ. ಇನ್ನು ಕೆಲವೇ ತಿಂಗಳಲ್ಲಿ ದೆಹಲಿ ವಿಧಾನಸಭೆಗೆ ಚುನಾವಣೆ ನಡೆಯಲಿದೆ.
ಆಪ್ ಸಂಚಾಲಕ, ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್(Arvind Kejriwal) ಅವರಿಗೆ ಸದಸ್ಯತ್ವ ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದಾರೆ. ಜನರಿಗೆ ನೀಡಿದ ಭರವಸೆಗಳನ್ನು ಈಡೇರಿಸಿಲ್ಲ. ಮೂಲಭೂತ ಸೌಲಭ್ಯಗಳನ್ನು ಒದಗಿಸುವಲ್ಲಿಯೂ ಸೋತಿದ್ದೇವೆ. ಜನರ ಹಕ್ಕುಗಳಿಗಿಂತ ಪಕ್ಷದ ಕಾರ್ಯಸೂಚಿ ಕಡೆ ಹೆಚ್ಚು ಗಮನ ಹರಿಸಲಾಗುತ್ತಿದೆ ಎನ್ನುವ ಆರೋಪವನ್ನು ಮಾಡಿದ್ದಾರೆ. ಈ ಬಗ್ಗೆ ಆಪ್ ನಾಯಕರು ಏನು ಹೇಳುತ್ತಾರೆ ನೋಡಬೇಕು. ಕೈಲಾಶ್(Kailash Gahlot) ಗೆಹ್ಲೋಟ್ ಬಿಜೆಪಿ ಅಥವ ಕಾಂಗ್ರೆಸ್ ಏನಾದರೂ ಸೇರ್ಪಡೆಯಾಗುತ್ತಾರ ಎನ್ನುವ ಕುತೂಹಲ ಸಹ ಮೂಡಿದೆ.