Ad imageAd image

ಕಾಶೀನಾಥ್ ಮಗನಿಗೇ ತಂದೆಯ ಹೆಸರಿನ ಟೈಟಲ್ ಸಿಗಲಿಲ್ಲ

ಕನ್ನಡ ಚಿತ್ರರಂಗದಲ್ಲಿ ಕಾಶೀನಾಥ್ ತಮ್ಮದೆಯಾದ ಛಾಪು ಮೂಡಿಸಿದ ಅದ್ಭುತ ನಟ, ನಿರ್ದೇಶಕ. ಅವರ ಪ್ರತಿಯೊಂದು ಚಿತ್ರಗಳು ಒಂದಕ್ಕಿಂತ ಒಂದು ವಿಭಿನ್ನ.

Nagesh Talawar
ಕಾಶೀನಾಥ್ ಮಗನಿಗೇ ತಂದೆಯ ಹೆಸರಿನ ಟೈಟಲ್ ಸಿಗಲಿಲ್ಲ
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಕನ್ನಡ ಚಿತ್ರರಂಗದಲ್ಲಿ ಕಾಶೀನಾಥ್ ತಮ್ಮದೆಯಾದ ಛಾಪು ಮೂಡಿಸಿದ ಅದ್ಭುತ ನಟ, ನಿರ್ದೇಶಕ. ಅವರ ಪ್ರತಿಯೊಂದು ಚಿತ್ರಗಳು ಒಂದಕ್ಕಿಂತ ಒಂದು ವಿಭಿನ್ನ. ಹೀರೋ ಅಂದರೆ ಆರಡಿ, ಸಿಕ್ಸ್ ಪ್ಯಾಕ್ ಎನ್ನುವ ಇವತ್ತಿನ ಕಾಲದಲ್ಲಿ ಸಣಕಲು ದೇಹ, ಅಷ್ಟೇನೂ ಸುಂದರವಲ್ಲದಿದ್ದರೂ ಹೀರೋ ಆಗಬಹುದು ಎನ್ನುವುದನ್ನು ತೋರಿಸಿಕೊಟ್ಟವರು. ಇವತ್ತಿಗೂ ಕಾಶೀನಾಥ್ ಸಿನಿಮಾಗಳನ್ನು ನೋಡುವ ಬಹುದೊಡ್ಡ ವರ್ಗವಿದೆ. ಅಂತಹ ಮಹಾನ್ ಕಲಾವಿದ, ನಿರ್ದೇಶಕನ ಮಗನಿಗೆ ತಮ್ಮ ತಂದೆಯ ಹೆಸರಿನ ಟೈಟಲ್ ಸಿಗಲಿಲ್ಲ ಎನ್ನುವುದು ಅಚ್ಚರಿ.

ಹೌದು ಕಾಶೀನಾಥ್ ಅವರ ಮಗ ಅಭಿಮನ್ಯು ನಟನೆಯ ಹೊಸ ಸಿನಿಮಾ ಅನೌನ್ಸ್ ಆಗಿದೆ. ಅದವೇ ‘ಅಭಿಮನ್ಯು ಸನ್ ಆಫ್ ಕಾಶೀನಾಥ್’ ಎಂದು. ಈಗಾಗ್ಲೇ ಕೆಲವು ಸಿನಿಮಾಗಳಲ್ಲಿ ಅಭಿಮನ್ಯು ನಟಿಸಿದ್ದಾರೆ. ‘ಎಲ್ಲಿಗೆ ಪಯಣ ಯಾವುದೋ ದಾರಿ’ ಸಿನಿಮಾ ರಿಲೀಸ್ ಆಗಬೇಕಿದೆ. ಇದೀಗ ವಿಜಯ ದಶಮಿಗೆ ಹೊಸ ಸಿನಿಮಾ ಅನೌನ್ಸ್ ಮಾಡಿದ್ದಾರೆ. ಈ ಚಿತ್ರಕ್ಕೆ ಸನ್ ಆಫ್ ಕಾಶೀನಾಥ್ ಎಂದು ಟೈಟಲ್ ಫಿಕ್ಸ್ ಮಾಡಿದ್ದರು. ಅದನ್ನು ಫಿಲ್ಮ್ ಬೋರ್ಡ್ ನಲ್ಲಿ ರಿಜಿಸ್ಟರ್ ಮಾಡಿಸಲು ಹೋದರೆ ಅದಾಗಲೇ ಬೇರೆಯವರ ಹೆಸರಲ್ಲಿ ನೋಂದಣಿಯಾಗಿದೆ. ಇದರಿಂದಾಗಿ ಅವರಿಗೆ ಬೇಸರವಾಗಿತ್ತು.

ತಮ್ಮ ತಂದೆಯ ಹೆಸರಿನ ಟೈಟಲ್ ತಮಗೆ ಸಿಗಲಿಲ್ಲವಲ್ಲ ಎಂದುಕೊಂಡಿದ್ದರು. ಕೊನೆಗೆ ನಿರ್ದೇಶಕರು ಅಭಿಮನ್ಯು ಸನ್ ಆಫ್ ಕಾಶೀನಾಥ್ ಎಂದು ಟೈಟಲ್ ಫಿಕ್ಸ್ ಮಾಡಿದರು. ಅದರ ಪೋಸ್ಟರ್ ಬಿಡುಗಡೆಯಾಗಿದೆ. ಇದು ಹೊಸ ಅನುಭವ ಎಂದು ಹೇಳುತ್ತಿದ್ದಾರೆ. ಪ್ರತಿಯೊಂದು ಕ್ಷೇತ್ರದಲ್ಲಿ ತಂದೆ, ತಾಯಿ ನಂತರ ಮಕ್ಕಳು ಅದೇ ಕ್ಷೇತ್ರಕ್ಕೆ ಬರುತ್ತಾರೆ. ಅದಕ್ಕೆ ಸಿನಿಮಾ ಹೊರತಾಗಿಲ್ಲ. ಕಾಶೀನಾಥ್ ಸಿನಿಮಾ ಅಂದರೆ ಸಿಗುವ ಖುಷಿ, ಸಂದೇಶ ನಟ ಅಭಿಮನ್ಯು ಚಿತ್ರದಲ್ಲಿ ಕಾಣಬಹುದೆ ಅಥವ ಅವರಿಗಿಂತ ವಿಭಿನ್ನ ಪ್ರಯೋಗ ಮಾಡಿ ಗೆಲ್ಲುತ್ತಾರ ಎನ್ನುವ ಕುತೂಹಲವಿದೆ.

WhatsApp Group Join Now
Telegram Group Join Now
Share This Article