LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ವಚನ ಸಾಹಿತ್ಯ ಬಿಟ್ಟು ಕನ್ನಡ ಸಾಹಿತ್ಯ ನೋಡಲು ಸಾಧ್ಯವಿಲ್ಲ: ಡಾ.ಎಂ.ಎಂ ಪಡಶೆಟ್ಟಿ

ಪ್ರಜಾಸ್ತ್ರ ಸುದ್ದಿ

ಸಿಂದಗಿ(Sindagi): ಕನ್ನಡ ಸಾಹಿತ್ಯ ಪರಂಪರೆಯಲ್ಲಿ ವಚನ ಸಾಹಿತ್ಯಕ್ಕೆ ತುಂಬಾ ವಿಶೇಷ ಸ್ಥಾನ ಇದೆ. ಕನ್ನಡನಾಡು ತುಂಬಾ ಸಂಪತ್ಭರಿತ ನಾಡು ಎಂದು ಹಿರಿಯ ಜಾನಪದ ವಿದ್ವಾಂಸ ಹಾಗೂ ಜಾನಪದ(folk) ಅಕಾಡೆಮಿ ಸದಸ್ಯ ಡಾ. ಎಂ.ಎಂ.ಪಡಶೆಟ್ಟಿ ಅವರು ಹೇಳಿದರು. ಪಟ್ಟಣದ ತಾಲೂಕು ಶರಣ ಸಾಹಿತ್ಯ ಪರಿಷತ್ತು ಸಿಂದಗಿ ಹಾಗೂ ಆರ್.ಡಿ.ಪಾಟೀಲ ಪ.ಪೂ.ಕಾಲೇಜಿನ ಸಹಯೋಗದಲ್ಲಿ ಹಮ್ಮಿಕೊಂಡ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಸಂಸ್ಥಾಪನಾ ದಿನ ಹಾಗೂ ಸಂಸ್ಥಾಪಕರಾದ ಸುತ್ತೂರು ಜಗದ್ಗುರು ಪೂಜ್ಯಶ್ರೀ ಡಾ.ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳ ಜನ್ಮದಿನದ ಅಂಗವಾಗಿ ಆಯೋಜಿಸಿರುವ ವಚನ ದಿನ ಸಮಾರಂಭದಲ್ಲಿ ಉಪನ್ಯಾಸ ನೀಡಿ ಅವರು ಮಾತನಾಡಿದರು.

12ನೇ ಶತಮಾನದ ವಚನ(vachana literature) ಸಾಹಿತ್ಯ ಶರಣರು ಕನ್ನಡಕ್ಕೆ ಕೊಟ್ಟ ಲೋಕ ಕಾಣಿಕೆ. ವಚನಗಳು ಕನ್ನಡ ಸಾಹಿತ್ಯ ಭಂಡಾರದ ಅಮೂಲ್ಯ ರತ್ನಗಳಾಗಿ ವಿಶ್ವ ಸಾಹಿತ್ಯ ದೃಷ್ಠಿಯಿಂದ ಕನ್ನಡ ಸಾಹಿತ್ಯದ ಬೆಲೆಯನ್ನು ಹೆಚ್ಚಿಸಿವೆ. ವಚನ ಸಾಹಿತ್ಯದ ಶ್ರೀಮಂತಿಕೆಗೆ ನೂರಾರು ಜನ ಶರಣರು ಶ್ರಮಿಸಿದ್ದಾರೆ. ವಿಶ್ವ ಸಾಹಿತ್ಯದಲ್ಲಿ ಎಷ್ಟೇ ಅದ್ಭುತ ಧಾರ್ಮಿಕ, ಸಾಮಾಜಿಕ ಪರಿವರ್ತನೆಯ ಸಾಹಿತ್ಯ ಮೂಡಿಬಂದಿದ್ದರೂ ವಚನ ಸಾಹಿತ್ಯವನ್ನು ಕಡೆಗಣಿಸಲು ಸಾಧ್ಯವಿಲ್ಲ. ಕಾರಣ ಅವು ಎಲ್ಲ ಕಾಲಕ್ಕೂ ಎಲ್ಲ ಜನರಿಗೂ ಸಲ್ಲುವಂತಹ, ಹೃದಯದಿಂದ ಮೂಡಿಬಂದಿರುವ ಅಮೃತ ಬಿಂದುಗಳು ಎಂದರು.

ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಶರಣಬಸವ ಜೋಗೂರ, ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಭೀಮನಗೌಡ ಸಿಂಗನಳ್ಳಿ ಮಾತನಾಡಿದರು. ಜಾನಪದ ದತ್ತಿ ಪ್ರಶಸ್ತಿಗೆ ಭಾಜನರಾದ ಬೋರಗಿಯ ತತ್ವಪದ ಹಾಗೂ ಜನಪದ ಹಾಡುಗಾರ್ತಿ ಇಮಾಂಬಿ ದೊಡಮನಿ, ಡಾಕ್ಟರೇಟ್ ಪದವಿ ಪಡೆದ ಜಿಪಿಪಿ ಕಾಲೇಜಿನ ದೈಹಿಕ ನಿರ್ದೇಶಕ ಡಾ.ರವಿ ಗೋಲಾ ಅವರನ್ನು ಗೌರವಿಸಲಾಯಿತು.

ಈ ವೇಳೆ ಕದಳಿ ವೇದಿಕೆ ಅಧ್ಯಕ್ಷೆ ಸುಜಾತಾ ಕಿಣಗಿ, ಶಿವಪ್ಪ ಗೌಸಾನಿ, ಬಿ.ಎಸ್.ಹನುಮಶೆಟ್ಟಿ, ಚನ್ನಪ್ಪ ಕತ್ತಿ, ಮಹಾನಂದಾ ಬಮ್ಮಣ್ಣಿ, ಮಹಾದೇವಪ್ಪ ಸಿಂದಗಿ, ಶಿವಶರಣ ಬೂದಿಹಾಳ, ಮಧು ಬಮ್ಮಣ್ಣಿ, ಜಗದೇವಿ ಅಂಬಲಗಿ, ಎಸ್.ಜಿ.ಮಾರ್ಸನಳ್ಳಿ, ಎನ್.ಬಿ.ಪೂಜಾರಿ, ಪಿ.ವ್ಹಿ.ಮಹಲಿನಮಠ, ಎಸ್.ಎಚ್.ಜಾಧವ, ಬಿ.ಬಿ.ಜಮಾದಾರ, ದುಂಡಯ್ಯ ಮಠಪತಿ, ರಾಹುಲ ನಾರಾಯಣಕರ್, ಸರಸ್ವತಿ ಸಿಂದಗಿ, ಸಂಗಮೇಶ ಚಾವರ, ಎನ್.ಎಂ.ಶೆಳ್ಳಗಿ, ನೀಲಕಂಠ ಮೇತ್ರಿ, ಆರ್.ಎಂ.ಕೊಳ್ಳೂರೆ, ಉದಯ ಶಿವಸಿಂಪಿಗೇರ, ಎಸ್.ಎಸ್.ತಾಳಿಕೋಟಿ, ಸುನೀಲ ಪಾಟೀಲ ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
Advertisement

Author
Publisher and Editor: Nagesh Talawar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST