LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ವಿಜಯಪುರ: ನೀರಾವರಿ ಸೌಲಭ್ಯ ಕಲ್ಪಿಸುವಂತೆ ಬೃಹತ್ ಪ್ರತಿಭಟನೆ

ಪ್ರಜಾಸ್ತ್ರ ಸುದ್ದಿ

ವಿಜಯಪುರ(Vijayapura): ಹೊರ್ತಿ ರೇವಣಸಿದ್ದೇಶ್ವರ ಏತ ನೀರಾವರಿ ಯೋಜನೆಯಡಿ ವಿಜಯಪುರ ತಾಲೂಕಿನ ನಾಗಠಾಣ ಮತಕ್ಷೇತ್ರದ ನೀರಾವರಿ ವಂಚಿತ ಗಡಿ ಗ್ರಾಮವಾದ ಕನ್ನೂರ ಗ್ರಾಮ ಪಂಚಾಯತ ವ್ಯಾಪ್ತಿಗೆ ನೀರಾವರಿ ಸೌಲಭ್ಯ ಕಲ್ಪಿಸುವಂತೆ ಒತ್ತಾಯಿಸಿ ವಿಜಯಪುರ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು. ನಗರದ ಡಾ.ಬಿ.ಆರ್.ಅಂಬೇಡ್ಕರ್ ಅವರ ವೃತ್ತದಿಂದ ವಿಜಯಪುರ ನಗರದ ಜಿಲ್ಲಾಧಿಕಾರಿಗಳ ಕಚೇರಿಯವರಿಗೆ ಬೃಹತ್ ಮೆರವಣಿಗೆ ನಡೆಸಲಾಯಿತು.

ಈ ಸಂದರ್ಭದಲ್ಲಿ ಸಮಗ್ರ ಹೋರಾಟ ಸಮಿತಿಯ ಕನ್ನೂರಿನ ಅಧ್ಯಕ್ಷರಾದ ಕಾಳಪ್ಪ ಬೆಳ್ಳುಂಡಗಿ, ಉಪಾಧ್ಯಕ್ಷರಾದ ಎಂ.ಎಚ್. ಪಠಾಣ ಮಾತನಾಡಿ, ಗಡಿ ಗ್ರಾಮದವಾದ ಕನ್ನೂರ ಗ್ರಾಮ ಪಂಚಾಯತಿ ವ್ಯಾಪ್ತಿಯನ್ನು ರೇವಣಸಿದ್ಧೇಶ್ವರ ಏತ ನೀರಾವರಿ 1ನೇ ಹಂತದಲ್ಲಿ ಕನ್ನೂರ ಗ್ರಾಮವನ್ನು ಸೇರಿಸಿ ಯೋಜನಾ ವರದಿ ಹಾಗೂ ಅಂದಾಜು ಪತ್ರಿಕೆ ತಯಾರಿಸಿ ಅತೀ ಶೀಘ್ರದಲ್ಲಿ ಕಾಮಗಾರಿಯನ್ನು ಕೆಗೆತ್ತಿಕೊಳ್ಳಲು ಮುಖ್ಯಮಂತ್ರಿಯವರಿಗೆ ಆಗ್ರಹಿಸಿದರು.

ಈ ಸಂದರ್ಭದಲ್ಲಿ ಎಂ.ಎಸ್.ಅಥಣಿ, ಭೀಮು ಶಿಂದೆ, ಮಾಳಪ್ಪ ಪೂಜಾರಿ, ಶಂಕರಗೌಡ ಪಾಟೀಲ, ಹಣಮಂತರಾಯಗೌಡ ಪಾಟೀಲ, ಸಂತೋಷ ತಳವಾರ, ರವಿ ಗಲಗಲಿ, ಬಸುಗೌಡ ಪಾಟೀಲ, ಸಂಜೀವ ಯಾದವಾಡ, ರಾಜುಗೌಡ ಪಾಟೀಲ, ಸುಭಾಸಗೌಡ ಪಾಟೀಲ, ರಫೀಕ ಮುಲ್ಲಾ, ಬಸು ಸೊಡ್ಡಿ, ದೇವೇಂದ್ರ ಒಡೆಯರ, ಅಪ್ಪಾಸಾಹೇಬ ಕಾಂಬಳೆ, ತುಕಾರಾಮ ಘೋರ್ಪಡೆ, ಪಾಂಡು ಧಾತೆ, ವಿಠ್ಠಲ ಭಜಂತ್ರಿ, ರಮೇಶ ಮೈಲಾರ, ಲೋಕು ಹೊಸೂರ, ಮಹಾದೇವ ನಾಠಗಾಣ, ದೇವಾನಂದ ರಾಠೋಡ, ವಿಜು ರಾಠೋಡ, ಮಹಾದೇವ ತಾಂಬೆ, ಶಕೀಲ ಮಧಭಾವಿ, ಮಶಾಕ ಚೌದರಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

Advertisement

Author
Editor: Nagesh Talawar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST