ಪ್ರಜಾಸ್ತ್ರ ಸುದ್ದಿ
ಸಿಂದಗಿ(Sindagi): ತಾಲೂಕು ಪಂಚಾಯತ್ ಆವರಣದಲ್ಲಿ ನೂತನವಾಗಿ ಜಾರಿಯಾದ ವಿಕಸಿತ ಭಾರತ ಗ್ಯಾರಂಟಿ ಫಾರ್ ರೋಜಾಗರ ಅಂಡ್ ಅಜೀವಿಕ ಮಿಷನ್ ಗ್ರಾಮೀಣ 2025 ಯೋಜನೆ ಅಂಗವಾಗಿ ಮಾಹಿತಿ ಶಿಕ್ಷಣ ಮತ್ತು ಸಂವಹನ (IEC) ಚಟುವಟಿಕೆಯಡಿ ಪೋಸ್ಟರ್ ಹಾಗೂ ಕರ ಪತ್ರಗಳು ಇಒ ಅನಿಲ.ಕೆ.ಹಳ್ಳಿ ಅವರು ಬಿಡುಗಡೆಗೊಳಿಸಿದರು. ಈ ವೇಳೆ ಮಾತನಾಡಿದ ಅವರು, 2026-2027ನೇ ಸಾಲಿನಿಂದ ನೋಂದಾಯಿತ ಪ್ರತಿ ಕುಟುಂಬಕ್ಕೆ 100-125 ದಿನ ಕೆಲಸ ಹೆಚ್ಚಳ ಮಾಡಲಾಗಿದ್ದು ದಿನಕ್ಕೆ 382 ರೂಪಾಯಿಯಂತೆ ಕೂಲಿ ಸಿಗಲಿದೆ. ಇದರ ಸದುಪಯೋಗ ಪಡೆಯಬೇಕು ಎಂದರು.
ಅದೇ ರೀತಿಯಾಗಿ ವ್ಯಯಕ್ತಿಕ ಕಾಮಗಾರಿ ಹಾಗೂ ಸುಮುದಾಯ ಕಾಮಗಾರಿಗಳು ಸೇರಿದಂತೆ 318 ಕಾಮಗಾರಿಗಳನ್ನು ತೆಗೆದುಕೊಳ್ಳಲು ಅನುಮತಿಸಲಾಗಿದೆ. ಜಲ ಸಂರಕ್ಷಣೆ ಕಾಮಗಾರಿ, ನೀರಾವರಿ, ಅಂತರ್ಜಲ ಮರುಪುರಣ, ಜಾಲಾನಯನ ಪ್ರದೇಶದ ಅಭಿವೃದ್ಧಿ, ಜಲಮೂಲಗಳ ಪುನಶ್ಚತನ, ಅರಣ್ಯಕರಣ ಸೇರಿದಂತೆ ಉತ್ತಮವಾದ ಅಭಿವೃದ್ಧಿ ಕಾಮಗಾರಿಗಳು ಅನುಷ್ಠಾನಗೊಳಿಸುವುದರ ಮೂಲಕ ಕಾರ್ಯನಿರ್ವಹಿಸೋಣ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ತಾಲೂಕು ಯೋಜನಾ ಅಧಿಕಾರಿ ರಾಜಶೇಖರ ಪೂಜಾರಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ರವಿ ಗುಂಡಳ್ಳಿ, ಬಸವರಾಜ್ ಶಹಾಪುರ, ಕಲ್ಮೇಶ ಜಾನಮಟ್ಟಿ, ಅಣ್ಣರಾಯ ರೂಗಿ, ಬಸಪ್ಪ ರೂಗಿ, ತಾರು ನಾಯ್ಕ, ದೇವೇಂದ್ರ ಪ್ಯಾಟಿ, ರಾಜು ವಂದಾಲ, ಉಸ್ಮಾನ ಗಣಿ ಸಿಂದಗಿ, ಬದಷಾ ಖಿಲ್ಜಿ, ಸಿದ್ರಾಮ ಸಿನಖೆಡ, ಭಾಷಸಾಬ್ ನದಾಫ್, ಉಸ್ಮಾನ ಸಿಂದಗಿಕರ, ಅಹ್ಮದ ಮಕಾನದರ, ಶಿವಾನಂದ ಕಡೆಮನಿ, ವಿಬಿಜಿರಾಮ್ ಜಿ ತಾಂತ್ರಿಕ ಸಂಯೋಜಕ ಶಿವಶರಣ ವಂದಗನೂರ, ಐಇಸಿ ಸಂಯೋಜಕ ಭೀಮರಾಯ ಚೌಧರಿ, ಎಂಐಎಸ್ ಸಂಯೋಜಕ ಸಂದೀಪ ಪಶುಪತಿಮಠ, ಸಾಗರ ಶೆಟ್ಟಿ, ಬಿಎಫ್ ಟಿಗಳಾದ ಆನಂದ, ಆರಿಫ್, ರಮೇಶ, ಬಸವರಾಜ ಹಾಗೂ ಕಾರ್ಯಾಲಯ ಸಿಬ್ಬಂದಿ ಹಾಜರಿದ್ದರು.



