LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ವಿಜಯಪುರ: ವಿಭಾಗ ಮಟ್ಟದ ಕಾಲೇಜು ನಾಟಕ ಸ್ಪರ್ಧೆಗೆ ಅರ್ಜಿ ಆಹ್ವಾನ

ಪ್ರಜಾಸ್ತ್ರ ಸುದ್ದಿ

ವಿಜಯಪುರ(Vijayapura): ಕರ್ನಾಟಕ ನಾಟಕ ಅಕಾಡೆಮಿ ಮತ್ತು ರಂಗಾಯಣ ಧಾರವಾಡ ಇವರ ಸಂಯುಕ್ತ ಆಶ್ರಯದಲ್ಲಿ 2025ರ ಜನವರಿಯಲ್ಲಿ ಕಾಲೇಜು ರಂಗೋತ್ಸವ ಕಾರ್ಯಕ್ರಮ ಆಯೋಜಿಸಲಾಗಿದೆ. ವಿಭಾಗ ಮಟ್ಟದ ಕಾಲೇಜು ನಾಟಕ ಸ್ಪರ್ಧೆ 5 ದಿನಗಳ ಕಾಲ ನಡೆಯಲಿದೆ. ನಾಟಕ ಸ್ಪರ್ಧೆಯಲ್ಲಿ ಜಿಲ್ಲಾ ವ್ಯಾಪ್ತಿಯಲ್ಲಿ ಬರುವ ಪಿಯುಸಿ, ಪದವಿ ಮತ್ತು ಸ್ನಾತಕೋತ್ತರ ಕಾಲೇಜುಗಳು ಭಾಗವಹಿಸಬಹುದು. ನಾಟಕ ಸ್ಪರ್ಧೆಯಲ್ಲಿ ವಿಜೇತ ತಂಡಗಳಿಗೆ ಮೊದಲನೇ ಬಹುಮಾನ 50 ಸಾವಿರ ರೂಪಾಯಿ, 2ನೇ ಬಹುಮಾನ 30 ಸಾವಿರ ರೂಪಾಯಿ, 3ನೇ ಬಹುಮಾನ 20 ಸಾವಿರ ರೂಪಾಯಿಗಳನ್ನು ಕರ್ನಾಟಕ ನಾಟಕ ಅಕಾಡೆಮಿಯಿಂದ ನೀಡಲಾಗುತ್ತದೆ.

ನಾಟಕ 45 ರಿಂದ 80 ನಿಮಿಷಗಳ ಅವಧಿಯದ್ದಾಗಿರಬೇಕು. ರಂಗದ ಮೇಲೆ ಅಭಿನಯಿಸುವ ಎಲ್ಲಾ ಕಲಾವಿದರು ವಿದ್ಯಾರ್ಥಿಗಳೇ ಆಗಿರಬೇಕು. ನೇಪಥ್ಯದಲ್ಲಿ ಸಂಗೀತ, ರಂಗಪರಿಕರ, ಮುಂತಾದವು ವಿದ್ಯಾರ್ಥಿಗಳಲ್ಲದವರೂ ಕಾರ್ಯನಿರ್ವಹಿಸಬಹುದು. ಕಾಲೇಜು ವಿದ್ಯಾರ್ಥಿಗಳು ನಾಟಕದ ದಿನ ನೋಂದಣಿ ಸಂದರ್ಭದಲ್ಲಿ ತಮ್ಮ ಕಾಲೇಜಿನ ಗುರುತಿನ ಚೀಟಿಗಳನ್ನು ಸಂಘಟಕರಿಗೆ ತೋರಿಸುವುದು ಕಡ್ಡಾಯ. ವಿವಾದಕ್ಕೊಳಗಾಗಿರುವ, ಕೋಮು ಸೌಹಾರ್ದವನ್ನು ಕೆಡಿಸುವ ಯಾವುದೇ ನಾಟಕಗಳಿಗೆ ಅವಕಾಶವಿರುವುದಿಲ್ಲ.

ಆಸಕ್ತ ಕಾಲೇಜು ವಿದ್ಯಾರ್ಥಿಗಳು ಬಿಳಿ ಹಾಳೆಯ ಮೇಲೆ ಸ್ವ-ವಿವರದೊಂದಿಗೆ  ಡಿಸೆಂಬರ್ 17, 2024ರ ಸಂಜೆ 5 ಗಂಟೆಯ ಒಳಗಾಗಿ ಆಡಳಿತಾಧಿಕಾರಿಗಳು, ರಂಗಾಯಣ ಪಂ.ಬಸವರಾಜ ಬಯಲು ರಂಗಮಂದಿರ, ಕಾಲೇಜು ರಸ್ತೆ, ಧಾರವಾಡ-580001 ಈ ವಿಳಾಸಕ್ಕೆ ಕುದ್ದು ಬಂದು ನೀಡಬಹುದು ಅಥವ ಅಂಚೆ ಮೂಲಕ ಅಥವಾ ಇಮೇಲ್ [email protected] ಮೂಲಕ ಕಳುಹಿಸಬಹುದು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 0836-2441706 ಸಂಪರ್ಕಿಸಬಹುದೆಂದು ವಿಜಯಪುರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆ ತಿಳಿಸಿದ್ದಾರೆ.
Advertisement

Author
Publisher and Editor: Nagesh Talawar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST