LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ವಿಜಯಪುರ: ಮಹಿಳಾ ಸಾಂತ್ವಾನ ಸಹಾಯವಾಣಿ ಕೇಂದ್ರಕ್ಕೆ ಸಿಇಒ ಭೇಟಿ

ಪ್ರಜಾಸ್ತ್ರ ಸುದ್ದಿ

ವಿಜಯಪುರ(Vijayapura): ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಕ(CEO) ಅಧಿಕಾರಿ ರಿಷಿ ಆನಂದ ಅವರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ(women and child welfare)ಇಲಾಖೆಯಡಿಯ ಸಾಂತ್ವನ ಮಹಿಳಾ ಸಹಾಯವಾಣಿ(Help line) ಕೇಂದ್ರಕ್ಕೆ ಶುಕ್ರವಾರ ಭೇಟಿ ನೀಡಿ ಪರಿಶೀಲಿಸಿದರು. ಕೇಂದ್ರದಲ್ಲಿ ಒದಗಿಸುತ್ತಿರುವ ಆಪ್ತ ಸಮಾಲೋಚನೆ ಹಾಗೂ ಸಲಹೆಗಳ ಕುರಿತು ಪರಿಶೀಲಿಸಿ, ದಾಖಲಾಗಿರುವ ಪ್ರಕರಣಗಳ ಪ್ರತ್ಯೇಕ ಕಡತ, ದೂರವಾಣಿ ಕರೆಗಳ ಸಹಿ, ಸಂದರ್ಶಕರ ಸಹಿ, ಆಪ್ತ ಸಮಾಲೋಚನಾ ದಾಖಲಾತಿ, ಕೇಂದ್ರದ ಮಾಸಿಕ ಪ್ರಗತಿ ವರದಿ, ಪ್ರಕರಣಗಳ ದಾಖಲಾತಿ ಪುಸ್ತಕ, ಸಿಬ್ಬಂದಿ ಹಾಜರಾತಿ ಪುಸ್ತಕ ಸೇರಿ ಹಲವಾರು ದಾಖಲಾತಿ ಪರಿಶೀಲಿಸಿದರು.

ಕೇಂದ್ರದಲ್ಲಿ ಒದಗಿಸಲಾದ ಮೂಲಭೂತ ಸೌಕರ್ಯಗಳ ಕುರಿತು ಪರಿಶೀಲನೆ ನಡೆಸಿದರು. ಸಾಂತ್ವನ ಕೇಂದ್ರಕ್ಕೆ ವರದಿಯಾಗುವ ಪ್ರಕರಣಗಳನ್ನು ಆದ್ಯತೆಯ ಮೇರೆಗೆ ಇತ್ಯರ್ಥಪಡಿಸಿ  ಸಕಾಲದಲ್ಲಿ ಪರಿಹಾರ ಒದಗಿಸಬೇಕು. ಸಾಂತ್ವನ ಕೇಂದ್ರದ ಕುರಿತು ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದು ಮಹಿಳಾ ಸಾಂತ್ವನ ಕೇಂದ್ರದ ಅಧಿಕಾರಿಗಳಿಗೆ ಸೂಚನೆ ನೀಡಿದರು

ಈ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ನಿರೂಪಣಾಧಿಕಾರಿ ಸಾವಿತ್ರಿ ಗುಗ್ಗರಿ, ಸಾಂತ್ವನ ಮಹಿಳಾ ಸಹಾಯವಾಣಿ ಕೇಂದ್ರದ ಅಧ್ಯಕ್ಷ ವಿಶ್ವನಾಥ್ ಬೆನಕಟ್ಟಿ, ಆಪ್ತ ಸಮಾಲೋಚಕ ರಿಯಾನಬಿ ಎಸ್.ಕಡಕೋಳ, ಸಮಾಜ ಕಾರ್ಯಕರ್ತೆ ಖಾಜಮ್ಮ ಮರಾಠಿ, ಸ್ನೇಹ ಹಾಬರಿ ಹಾಗೂ ಇತರರು ಉಪಸ್ಥಿತರಿದ್ದರು.
Advertisement

Author
Publisher and Editor: Nagesh Talawar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST